ದೇಶ

ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿ: ಮದುಮಗ ಸೇರಿ 6 ಮಂದಿ ದುರ್ಮರಣ

ಭೋಪಾಲ್,ಡಿ.4-ಅಪಘಾತದಲ್ಲಿ ಹಸೆಮಣೆ ಏರಬೇಕಿದ್ದ ಮದುಮಗ ಸೇರಿದಂತೆ 6 ಮಂದಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಖಂಡವಾ ಜಿಲ್ಲೆಯಲ್ಲಿ ನಡೆದಿದೆ.

ಮದುವೆ ದಿಬ್ಬಣ ಹೊತ್ತ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಖಂಡವಾ ಜಿಲ್ಲೆಯ ಖಾಲ್ವಾ ಕ್ಷೇತ್ರದ ಮಹಲೂ ಗ್ರಾಮದ ಸೇತುವೆ ಮೇಲಿಂದ ಪಲ್ಟಿಯಾಗಿದೆ. ಟ್ರಾಲಿಯಲ್ಲಿ ಕುಳಿತಿದ್ದ ಜನರು ಸೇತುವೆ ಮೇಲಿಂದ 15 ಅಡಿ ಆಳದ ನದಿಗೆ ಬಿದ್ದಿದ್ದಾರೆ. ಈ ವೇಳೆ ಮದುಮಗ, ಆತನ ತಾಯಿ, ತಂದೆ ಸೇರಿದಂತೆ ಒಟ್ಟು ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಟ್ರಾಲಿಯಲ್ಲಿ ಒಟ್ಟು 35 ಜನರು ಪ್ರಯಾಣಿಸುತ್ತಿದ್ದರು. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಖಂಡವಾ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಖಾಲ್ವಾ ಠಾಣೆಯ ಪೊಲೀಸರು ಹೇಳಿದ್ದಾರೆ. ಇಡೀ ಊರಿನಲ್ಲಿ ಸೂತಕದ ಛಾಯೆ ಆವರಿಸಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: