ಮೈಸೂರು

ಶಿವಜ್ಯೋತಿ ಪಣದ ಗಾಣಿಗರ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮನವಿ

ಮೈಸೂರು,ಡಿ.4:- ರಾಜ್ಯದಲ್ಲಿ ಶಿವಜ್ಯೋತಿ ಪಣದ ಗಾಣಿಗರ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಅಖಿಲ ಕರ್ನಾಟಕ ಗಾಣಿಗರ ಸಂಘದ ಉಪಾಧ್ಯಕ್ಷ ಹಾಗೂ ಬಿಜೆ ಪುಟ್ಟಸ್ವಾಮಿ ಸ್ನೇಹ ಬಳಗದ ಮುಖಂಡ ಕೆ.ಆರ್.ಚೆನ್ನಕೇಶವ ಶೆಟ್ಟಿ ಮನವಿ ಮಾಡಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ನಮ್ಮ ಶಿವಜ್ಯೋತಿಪಣದ ಗಾಣಿಗರ ಸಮುದಾಯವು ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು 15ಲಕ್ಷಕ್ಕಿಂತ ಹೆಚ್ಚು ಜನರಿದ್ದಾರೆ. ಈ ಪೈಕಿ ಶೇ.80ರಷ್ಟು ಜನರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಡು ಬಡತನದಲ್ಲಿ ಜೀವನ ಮಾಡುತ್ತಿದ್ದು ಶೇ.80ಕ್ಕೂ ಹೆಚ್ಚು ಜನರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ದುಸ್ಥಿತಿಯಲ್ಲಿದ್ದಾರೆ ಎಂದರು.
ಎಷ್ಟೋ ಕುಟುಂಬಗಳಿಗೆ ವಾಸಿಸಲು ಸೂರು ಇರಲ್ಲ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಕೋವಿಡ್ 19 ಸಮಯದಲ್ಲಿ ಕೆಲಸವಿಲ್ಲದ ಕಾರಣ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಶಿವಜ್ಯೋತಿಪಣದ ಗಾಣಿಗರ ಸಮುದಾಯದ ಬಗ್ಗೆ ನಿಮಗೂ ಅರಿವಿರಬಹುದು. ನಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ಸಾಕ್ಷರತೆ ಪ್ರಮಾಣ ಮತ್ತು ಜೀವನ ಮಟ್ಟದ ಬಗ್ಗೆ ಅರಿವಿರುವುದರಿಂದ ರಾಜ್ಯಮಟ್ಟದಲ್ಲಿ ಶಿವಜ್ಯೋತಿ ಪಣದ ಗಾಣಿಗರ ಅಭಿವೃದ್ಧಿ ನಿಗಮವೊಂದನ್ನು ಸ್ಥಾಪಿಸುವ ಅನಿವಾರ್ಯತೆ ಇದೆ. ನಮ್ಮ ಜನಾಂಗಕ್ಕೆ ನೀಡಿರುವ 2ಎ ಯನ್ನು ಮುಂದುವರಿಸುವಂತೆ ಮನವಿ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: