
ಕರ್ನಾಟಕಪ್ರಮುಖ ಸುದ್ದಿಮನರಂಜನೆ
ನಟಿ ರಾಗಿಣಿಗೆ ಸದ್ಯಕ್ಕಿಲ್ಲ ಜಾಮೀನು: ಸುಪ್ರೀಂ ಕೋರ್ಟ್ ನಲ್ಲೂ ನಿರಾಸೆ
ಬೆಂಗಳೂರು,ಡಿ.4-ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ ನಲ್ಲೂ ನಿರಾಸೆಯಾಗಿದೆ.
ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ 2021ರ ಜನವರಿ ತಿಂಗಳಲ್ಲಿ ವಿಚಾರಣೆ ಮಾಡುವುದಾಗಿ ತಿಳಿಸಿದೆ. ಈ ಮೂಲಕ ಮತ್ತಷ್ಟು ದಿನ ರಾಗಿಣಿ ಪರಪ್ಪನ ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ.
ಮತ್ತೊಂದೆಡೆ ಕರ್ನಾಟಕ ಹೈ ಕೋರ್ಟ್ನಲ್ಲಿ ನಟಿ ಸಂಜನಾ ಸಲ್ಲಿಸಿರುವ ಜಾಮೀನು ಅರ್ಜಿ ಇಂದು ಮತ್ತೊಮ್ಮೆ ವಿಚಾರಣೆ ನಡೆಯಲಿದೆ.
ಇದಕ್ಕೂ ಮುಂಚೆ ರಾಗಿಣಿ ಹೈ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕರ್ನಾಟಕ ಹೈ ಕೋರ್ಟ್ ನ.3 ರಂದು ರಾಗಿಣಿ ಮತ್ತು ಸಂಜನಾ ಇಬ್ಬರ ಜಾಮೀನು ಅರ್ಜಿ ವಜಾಗೊಳಿಸಿತ್ತು. ಸದ್ಯಕ್ಕೆ ಸಂಜನಾ ಮತ್ತು ರಾಗಿಣಿ ಇಬ್ಬರು ಜೈಲಿನಿಂದ ಹೊರಬರುವ ಲಕ್ಷಣ ಕಾಣುತ್ತಿಲ್ಲ.
ಈಗಾಗಲೇ ಮೂರು ತಿಂಗಳು ಜೈಲು ವಾಸ ಅನುಭವಿಸಿರುವ ನಟಿಯರು ಈ ಸಲ ಹೊಸ ವರ್ಷವನ್ನು ಜೈಲಿನಲ್ಲಿಯೇ ಆಚರಣೆ ಬೇಕಿದೆ. ಅಂದ್ಹಾಗೆ, ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಅವರನ್ನು ಸೆಪ್ಟೆಂಬರ್ 4 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸೆಪ್ಟೆಂಬರ್ 8 ರಂದು ನಟಿ ಸಂಜನಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. (ಎಂ.ಎನ್)