ಮೈಸೂರು

ಗ್ರಾಮ ಪಂಚಾಯಿತಿಗಳಿಗೆ ‘ಸಕಾಲ’ಅಡಿಯಲ್ಲೇ ಅರ್ಜಿ ಸಲ್ಲಿಸಿ : ಸಿ.ಇ.ಒ

ಮೈಸೂರು. ಡಿ.5:- ಸಾರ್ವಜನಿಕರು ಗ್ರಾಮ ಪಂಚಾಯತಿಗಳಲ್ಲಿ ‘ಸಕಾಲ’ ಅಧಿ ನಿಯಮದಡಿ ಅರ್ಜಿಗಳನ್ನು ಸಲ್ಲಿಸಿ, ಸ್ವೀಕೃತಿ ಪಡೆಯುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು ಗ್ರಾಮ ಪಂಚಾಯಿತಿಯಲ್ಲಿ 11 ಸೇವೆಗಳನ್ನು ಸಕಾಲ ಅಧಿನಿಯಮ ಅಡಿಯಲ್ಲಿ ನೀಡಲಾಗುತ್ತಿದ್ದು, ಸಕಾಲ ಅರ್ಜಿ ಸಂಖ್ಯೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಡಿಜಿಟಲ್ ಸಹಿ ಇಲ್ಲದಿದ್ದರೆ ಈ ಸೇವೆಗಳಿಗೆ ವಿತರಿಸಲಾಗುವ ಯಾವುದೇ ಪ್ರಮಾಣಪತ್ರಗಳು ಕಾನೂನುಬದ್ಧವಾಗಿ ಮಾನ್ಯವಾಗಿರುವುದಿಲ್ಲ ಎಂದು 12-11-2020ರ ಸರ್ಕಾರದ ಸುತ್ತೋಲೆಯಲ್ಲಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.
ಕರ್ನಾಟಕ ಸೇವೆಗಳ ಖಾತರಿ ಅಧಿನಿಯಮ, 2011ರಡಿ ಗ್ರಾಮ ಪಂಚಾಯತ್‍ಗಳಲ್ಲಿ ಜಾರಿಗೊಳಿಸಿದ್ದು ಸಕಾಲ ಸೇವೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ನಮೂನೆ9/11ಎ, ನಮೂನೆ 11ಬಿ, ವಾಣಿಜ್ಯ ಪರವಾನಿಗಿ, ಕಟ್ಟಡ ಪರವಾನಗಿ, ರಸ್ತೆ ಅಗೆಯುವುದಕ್ಕಾಗಿ ಅನುಮತಿ, ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಗ್ರಾಮ ನೈರ್ಮಲ್ಯ ನಿರ್ವಹಣೆ, ಇಎಸ್‍ ಸಿಒಎಮ್‍ ಎಸ್ ಆಕ್ಷೇಪಣೆ ರಹಿತ ಪತ್ರ ವಿತರಣೆ, ದಾಖಲೆಗಳ ವಿತರಣೆ (ಜನಸಂಖ್ಯೆ, ಬೆಳೆ, ಜಾನುವಾರು, ಗಣತಿ, ಬಿಪಿಎಲ್ ಪಟ್ಟಿ) ಹಾಗೂ ಆಸ್ತಿ ತೆರಿಗೆ ಸೇರಿದಂತೆ 11 ಸೇವೆಗಳು ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: