ಮೈಸೂರು

ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿದ ನೈರುತ್ಯ ರೈಲ್ವೆಯಿಂದ ಕೆಲ ರೈಲು ಸಂಚಾರಕ್ಕೆ ಸಜ್ಜು

ಮೈಸೂರು,ಡಿ.5:- ನೈರುತ್ಯ ರೈಲ್ವೆ ಪ್ರಯಾಣಿಕರು ಹಾಗೂ ಸಾರ್ವಜನಿಕರ ಬಹುದಿನದ ಬೇಡಿಕೆಗೆ ಸ್ಪಂದಿಸಿ ಕೆಲ ರೈಲು ಸಂಚಾರ ಆರಂಭಿಸಲು ಸಜ್ಜಾಗಿದೆ.
ಮೈಸೂರು ವಿಭಾಗದಿಂದ ಹೊರಡುವ ಮತ್ತು ವಿಭಾಗದ ವ್ಯಾಪ್ತಿಯಲ್ಲಿ ಚಲಿಸುವ ಕಾಯ್ದಿರಿಸದ, ಸಂಪೂರ್ಣವಾಗಿ ಕಾಯ್ದಿರಿಸಿದ ಪ್ರಯಾಣಿಕ ಎಕ್ಸಪ್ರೆಸ್ ರೈಲುಗಳನ್ನು ಸಾಮಾನ್ಯ ಶುಲ್ಕದೊಂದಿಗೆ ಓಡಿಸಲು ನೈರುತ್ಯ ರೈಲ್ವೆ ನಿರ್ಧಿರಿಸಿದೆ. ಈ ರೈಲುಗಳ ಸಂಚಾರದಿಂದ ಮೈಸೂರು ವಿಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇವು ರಾಜ್ಯ ಹಾಗೂ ನೆರೆಯ ರಾಜ್ಯಗಳ ವಿವಿಧ ಜಿಲ್ಲೆಗಳನ್ನು ಸಂಪರ್ಕಿಸಲಿವೆ.
ಕೋವಿಡ್ 19 ನಿಂದ ರೈಲ್ವೆ ಸೇವೆ ರದ್ದಾದ ಬಳಿಕ ಮೈಸೂರು ವಿಭಾಗದಲ್ಲಿ ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲುಗಳಿವು ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೈಲುಗಳ ಬಳಕೆ ಅವಲಂಬಿಸಿ ಮುಂದಿನ ವಿಸ್ತರಣೆ ಪರಿಗಣಿಸಲಾಗುತ್ತದೆ. ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದು, ನೈರ್ಮಲ್ಯೀಕರಣ ಇತ್ಯಾದಿಗಳನ್ನು ಒಳಗೊಂಡಂತೆ ಕೋವಿಡ್-19ಗೆ ಸಂಬಂಧಿಸಿದ ರಾಜ್ಯ ಕೇಂದ್ರ ಸರ್ಕಾರದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮನವಿ ಮಾಡಿದೆ.
ಸಂಪೂರ್ಣವಾಗಿ ಕಾಯ್ದಿರಿಸಿದ ರೈಲುಗಳು
ಮೈಸೂರು-ತಾಳಗುಪ್ಪ (ಪ್ರತಿದಿನ ಡಿ.9ರಿಂದ 18), ಮೈಸೂರು-ಬಾಗಲಕೋಟೆ, ಕೆ.ಎಸ್ ಆರ್, ಬೆಂಗಳೂರು-ಧಾರವಾಡ, ಕೆಎಸ್ ಆರ್. ಬೆಂಗಳೂರು-ಮೀರಜ್, ಕೆಎಸ್ ಆರ್, ಬೆಂಗಳೂರು-ತಾಳಗುಪ್ಪ(ಪ್ರತಿದಿನ ಡಿ.7ರಿಂದ 16),
ಕಾಯ್ದಿರಿಸದ ರೈಲುಗಳು
ಮೈಸೂರು ಕೆಎಸ್ ಆರ್ ಬೆಂಗಳೂರು, ಮೈಸೂರು ಚಾಮರಾಜನಗರ, ಯಶವಂತಪುರ-ಹಾಸನ, ಯಶವಂತಪುರ-ಹೊಸಪೇಟೆ(ಪ್ರತಿದಿನ ಡಿ.7ರಿಂದ 16), ಬಂಗಾರಪೇಟೆ –ಮೈಸೂರು(ಮೆಮು, ಭಾನುವಾರ ಹೊರತುಪಡಿಸಿ ವಾರಕ್ಕೆ 6ದಿನ , ಡಿ.7ರಿಂದ 17). (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: