ದೇಶಪ್ರಮುಖ ಸುದ್ದಿ

ಗೋರಕ್ಷಣೆ ಮಾಡುವ ನಿಮಗೆ ಮಹಿಳೆಯರ ಬಗ್ಗೆ ಕಾಳಜಿಯಿಲ್ಲವೇ? ಬಿಜೆಪಿ ವಿರುದ್ಧ ಜಯಾ ಬಚ್ಚನ್‍ ಕಿಡಿ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುವ ಮೋರ್ಚಾ ನಾಯಕನೋರ್ವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಲೆ ಕಡಿದವರಿಗೆ 11 ಲಕ್ಷ ರೂ. ಇನಾಮು ಕೊಡುತ್ತೇನೆಂದು ಬಹಿರಂಗ ಹೇಳಿಕೆ ನೀಡಿದ್ದಾನೆ. ಗೋವು ರಕ್ಷಣೆ ಮಾಡುವ ನೀವು ಅದೇ ಕಾಳಜಿಯನ್ನು ಮಹಿಳೆಯರ ಮೇಲೆ ಏಕೆ ತೋರಿಸುವುದಿಲ್ಲ ಬಿಜೆಪಿಯನ್ನು ಎಂದು ಸಂಸದೆ ಜಯಾ ಬಚ್ಚನ್‍ ಪ್ರಶ್ನಿಸಿದರು.

ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಜಯಾ ಬಚ್ಚನ್ ಅವರು ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿ, ಈ ವಿಷಯದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರ ಗೋರಕ್ಷಣೆಗೆ ಬದ್ಧವಾಗಿದೆ. ಆದರೆ, ಮಹಿಳೆಯರ ರಕ್ಷಣೆಗಲ್ಲ ಎಂದು ಹಳಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಅಸುರಕ್ಷತೆ ಅಭದ್ರತೆ ಭಾವನೆಗಳು ಮೂಡುತ್ತಿವೆ. ಇಂತಹ ವಾತಾವಣವನ್ನು ಬಿಜೆಪಿ ಉತ್ತೇಜಿಸುತ್ತಿದೆಯೇ ಎಂದು ಮೋದಿ ಸರ್ಕಾರಕ್ಕೆ ಅವರು ಪ್ರಶ್ನಿಸಿದರು.

ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಹನುಮಾನ್ ಜಯಂತಿ ಪ್ರಯುಕ್ತ ‘ಜೈ ಶ್ರೀ ರಾಮ್’ ರ್ಯಾಲಿ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಇದರಿಂದ ಕ್ರುದ್ಧನಾದ ಬಿಜೆಪಿ ಯುವಮೋರ್ಚಾ ಮುಖಂಡ ಯೋಗೇಶ್ ವರ್ಶ್ನೆ, ಮಮತಾ ಬ್ಯಾನರ್ಜಿಯವರ ತಲೆ ಕಡಿದವರಿಗೆ ರೂ.11 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ರಾಜ್ಯ ಸಭೆಯಲ್ಲಿ ಈ ಹೇಳಿಕೆಯನ್ನು ಪ್ರಸ್ತಾಪಿಸಿದ ಜಯಾ ಬಚ್ಚನ್ ಅವರು ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

(ಎನ್‍.ಬಿ.ಎನ್)

Leave a Reply

comments

Related Articles

error: