ಮೈಸೂರು

ವಿಸ್ತಾರಗೊಂಡ ಮೈಸೂರು ನಗರ ವ್ಯಾಪ್ತಿಯ ಗಡಿ

ಮೈಸೂರು,ಡಿ.5:- ರಾಜ್ಯ ಸರ್ಕಾರವು ಇತ್ತೀಚೆಗೆ ಹೂಟಗಳ್ಳಿ ನಗರಸಭೆ ಮತ್ತು ನಾಲ್ಕು ಪಟ್ಟಣ ಪಂಚಾಯಿತಿಗಳನ್ನು ರಚಿಸಿದ ಹಿನ್ನೆಲೆಯಲ್ಲಿ ಮೈಸೂರು ನಗರ ವ್ಯಾಪ್ತಿಯ ಗಡಿಯು ವಿಸ್ತಾರಗೊಂಡಿದೆ.

ನಗರಸಭೆ, ಪಟ್ಟಣ ಪಂಚಾಯಿತಿಗಳ ರಚನೆಗೂ ಮುನ್ನ ಮೈಸೂರು ನಗರ ವ್ಯಾಪ್ತಿಯು 155.7 ಚ.ಕೀ. ಇತ್ತು. ಇದೀಗ 235 ಚ.ಕೀ. ವ್ಯಾಪ್ತಿಗೆ ವಿಸ್ತಾರಗೊಂಡಿದೆ. ಯಾವುದೇ ಮೆಟ್ರೋಪಾಲಿಸ್ ನಗರ ಎನಿಸಿಕೊಳ್ಳಲು 1.5 ಮಿಲಿಯನ್‌ನಿಂದ 2 ಮಿಲಿಯನ್ (2 ದಶಲಕ್ಷ) ಜನಸಂಖ್ಯೆಯಿಷ್ಟಿರಬೇಕಾಗಿರುತ್ತದೆ. ಹೀಗಾಗಿ ನಗರ ವಿಸ್ತರಣೆಯಿಂದ ಮೆಟ್ರೋಪಾಲಿಸ್ ನಗರ ಎನಿಸಿಕೊಳ್ಳುವ ತವಕದಲ್ಲಿದೆ.

ಈ ಹಿಂದೆ ನಗರ ಮಹಾಯೋಜನೆಯ ರೂಪಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 2031ಕ್ಕೆ 292.5 ಚ.ಕೀ. ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಒಂದು ನಗರಸಭೆ ಮತ್ತು ನಾಲ್ಕು ಪಟ್ಟಣ ಪಂಚಾಯಿತಿ ರಚನೆಯಿಂದ ಈಗಲೇ 235 ಚ.ಕೀ. ವ್ಯಾಪ್ತಿ ವಿಸ್ತರಿಸಿಕೊಂಡಂತಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: