ಕರ್ನಾಟಕ

ಬಾವಿಯಲ್ಲಿ ನೀರು ಕುಡಿಯಲು ಹೋಗಿ ಪ್ರಾಣಬಿಟ್ಟ ಮೂವರು ಬಾಲಕರು

ಯಾದಗಿರಿ: ಬಾವಿಯಲ್ಲಿ ನೀರು ಕುಡಿಯಲು ಹೋಗಿದ್ದ ಮೂವರು ಬಾಲಕರು ನೀರಲ್ಲಿ ಮುಳುಗಿ ಪ್ರಾಣಬಿಟ್ಟ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕು ನಾರಾಯಣಪುರ ಐಬಿ ತಾಂಡಾದಲ್ಲಿ ನಡೆದಿದೆ.

ಅಜಯ 12, ವಿಜಯ್ 11 , ಗಣೇಶ 13 ಮೃತ ಬಾಲಕರು. ತನ್ನ ಅಜ್ಜಿ ಯಮುನಾಬಾಯಿ ಜೋತೆ ತಮ್ಮ ಹೊಲಕ್ಕೆ ತೆರಳಿದಾಗ ಬಿಸಿಲಿನ ಝಳ ತಾಳದೆ ಬಾಯಾರಿಕೆ ತಣಿಸಿಕೊಳ್ಳಲು ಅಜ್ಜನ ಜಮೀನಿನ ಬಾವಿಯಲ್ಲಿ ಇಳಿದಾಗ ಬಾಲಕರು ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ನಾರಾಯಣಪುರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

(ಎಸ್‍.ಎನ್‍/ಎನ್‍.ಬಿ.ಎನ್)

Leave a Reply

comments

Related Articles

error: