ಕರ್ನಾಟಕಪ್ರಮುಖ ಸುದ್ದಿ

ಹಿರಿಯೂರು ಸಮೀಪ ಕೆಎಸ್ಆರ್ ಟಿಸಿ ಬಸ್ ಪಲ್ಟಿ : ಇಬ್ಬರು ಪ್ರಯಾಣಿಕರು ಸಾವು

ರಾಜ್ಯ( ಚಿತ್ರದುರ್ಗ)ಡಿ.6:- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಕೆಎಸ್ಆರ್ ಟಿಸಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಳ್ಳಕೆರೆ ರಸ್ತೆಯ ಶಿವಮೂರ್ತಿ ನಗರ ಬಳಿ ಭಾನುವಾರ ಮುಂಜಾನೆ 4.30ರ ಸಮಯಕ್ಕೆ ಈ ಘಟನೆ ನಡೆದಿದೆ. ಅತೀ ವೇಗವಾಗಿ ಬಸ್ ಚಲಾಯಿಸಿದ್ದು ಘಟನೆಗೆ ಕಾರಣ ಶಹಾಪುರದಿಂದ ಬೆಂಗಳೂರು ಕಡೆಗೆ ಹೋಗುವಾಗ ಕೆಎಎಸ್ ಆರ್ ಟಿಸಿ ಬಸ್ ಚಾಲಕ ಅತೀ ವೇಗವಾಗಿ ಬಸ್ ಚಲಾಯಿಸಿದ್ದು, ಬಸ್ ರಸ್ತೆಯ ಎಡಭಾಗಕ್ಕೆ ಪಲ್ಟಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬಸ್ಸಿನಲ್ಲಿ ಸುಮಾರು 50 ಜನರಿದ್ದು, ಪ್ರಯಾಣಿಕರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಘಟನೆ ನಡೆಯುತ್ತಿದ್ದಂತೆ ಬಸ್ ಚಾಲಕ ಮತ್ತು ನಿರ್ವಾಹಕ ನಾಪತ್ತೆಯಾಗಿದ್ದಾರೆ.

ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: