ಮೈಸೂರು

ಇಡೀ ಮಹಿಳಾ ಕುಲಕ್ಕೆ ಮಾದರಿಯಾದ ಮಹಿಳೆ ಅಕ್ಕಮಹಾದೇವಿ : ನಗರ್ಲೆ ಶಿವಕುಮಾರ್ ಬಣ್ಣನೆ

ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ತನ್ನ ಕುಟುಂಬವನ್ನೇ ತೊರೆದು ಇಡೀ ಮಹಿಳಾ ಕುಲಕ್ಕೆ ಮಾದರಿಯಾದ ಮಹಿಳೆ ಅಕ್ಕಮಹಾದೇವಿ ಎಂದು ಸಾಹಿತಿ ನಗರ್ಲೆ ಶಿವಕುಮಾರ್ ಹೇಳಿದರು.

ಶರಣು ವಿಶ್ವವಚನ ಫೌಂಡೇಶನ್  ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಅಕ್ಕ  ಕೌಷಿಕ ಮಹಾರಾಜನಿಗೆ ವಿಧಿಸಿದ್ದ ಷರತ್ತುಗಳನ್ನು ಮೀರಿದಾಗ ತನ್ನ ಪತಿ ರಾಜನಾದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಅನ್ಯಾದ ವಿರುದ್ಧ ಧ್ವನಿ ಎತ್ತಿದ ಪ್ರಥಮ ಮಹಿಳೆಯಾಗಿ ಗೋಚರಿಸುತ್ತಾಳೆ.ಅನಂತರ ಅವಳು ಬಸವಕಲ್ಯಾಣದ ಅನುಭವ ಮಂಟಪಕ್ಕೆ ಹೋದಾಗ ಅಲ್ಲಿ ಅಲ್ಲಮಪ್ರಭು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ದಿಟ್ಟತನದಿಂದ ಉತ್ತರಿಸಿ ಅದರ ಸದಸ್ಯಳಾಗಿ ಸೇರ್ಪಡೆಯಾಗುತ್ತಾಳೆ.ಅಲ್ಲಿ  434 ವಚನಗಳನ್ನು ರಚಿಸಿ ಕನ್ನಡದ ಪ್ರಥಮ ಕವಯಿತ್ರಿಯಾಗಿ ಕನ್ನಡ ಸಾಹಿತ್ಯದಲ್ಲಿ ಸ್ಥಾನ ಪಡೆದಳು.ನಂತರ ಶ್ರೀಶೈಲದ ಕದಳಿವನದಲ್ಲಿ ಐಕ್ಯರಾದರು. ನಂತರ ಮಾತನಾಡಿದ ಸಾಹಿತಿ ಎಂ.ಎ.ನೀಲಾಂಬಿಕರವರು 12ನೇ ಶತಮಾನದಲ್ಲಿಯೇ ಅನ್ಯಾಯದ ವಿರುದ್ದ ಸಿಡಿದೆದ್ದ ಉಡುತಡಿಯ ಕಿಡಿಯಾಗಿ ಅಕ್ಕ ಗೋಚರಿಸುತ್ತಾಳೆ. ಅವಳು ರಚಿಸಿದ ವಚನಗಳು ಇಡೀ ಮನುಕುಲಕ್ಕೆ ದಾರಿದೀಪವಾಗುವುದರ ಜೊತೆಗೆ ನಮ್ಮ ಜೀವನದಲ್ಲಿ ಎದುರಾಗುವ ಕಷ್ಟ, ಸುಖ, ನೋವು, ನಲಿವು ಮುಂತಾವುಗಳನ್ನು ತಾಳ್ಮೆಯಿಂದ ಎದುರಿಸಲು ಸಹಾಯಕವಾಗುವುದರ ಜೊತೆಗೆ ಯಾವುದೇ ಕಾರಣಕ್ಕೂ ಎದೆಗುಂದಬಾರದು ಎಂಬ ನೀತಿಪಾಠವನ್ನು ಸಾರುತ್ತವೆ ಎಂದರು.ತದನಂತರ ಮಾತನಾಡಿದ ಸುಜಾತಪ್ರಭುಸ್ವಾಮಿರವರು ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ, ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ, ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ, ಅಜಗಣ್ಣನ ಐದು ವಚನಕ್ಕೆ ಕೂಡಲಚೆನ್ನಸಂಗಮದೇವಾ ಮಹಾದೇವಿಯಕ್ಕನ ಒಂದು ವಚನ ನಿರ್ವಚನ ಎಂದು ಚೆನ್ನಬಸವಣ್ಣ ಹೇಳಿರುವಂತೆ ವಚನ ಸಾಹಿತ್ಯದಲ್ಲಿಯೇ ಅಕ್ಕನವರ ವಚನ ಅತ್ಯುನ್ನತ ಸ್ಥಾನ ಪಡೆದಿದೆ ಎಂದರು.

ಮೈಸೂರು ಆರ್ಟ್ ಗ್ಯಾಲರಿಯ ಅಧ್ಯಕ್ಷ ಎಂ.ಶಿವಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶ್ರೀಕಂಠಮೂರ್ತಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಕೇಂದರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ, ಪೂರ್ಣಿಮ, ದಿವ್ಯಚೇತನ್, ರಾಜಶೇಖರ್, ಲಿಂಗಪ್ಪ, ಮಂಜುಳ ರಾಜೇಶ್, ಮಂಜುಳ ಮಧು, ಅಕ್ಕಮಹಾದೇವಿಮರಮ್ಕಲ್, ಗೀತಾ ಬಸವರಾಜು, ಹೇಮಲತಾ,ಶ್ರೀಕಂಠಸ್ವಾಮಿ, ಶಾಂತ,ಪ್ರಭುಸ್ವಾಮಿ, ಶಿವರುದ್ರಪ್ಪ ಉಪಸ್ಥಿತರಿದ್ದರು.  (ಬಿ.ಎಂ-ಎಸ್.ಎಚ್)

Leave a Reply

comments

Related Articles

error: