ಮೈಸೂರು

ರೈಲ್ವೆ ಸಪ್ತಾಹ ಸಮಾರಂಭ

ಮೈಸೂರಿನ ಒಂಟಿಕೊಪ್ಪಲ್ ನ ರೈಲ್ವೆ ಕಲ್ಯಾಣ ಮಂಟಪದಲ್ಲಿ ನೈರುತ್ಯ ರೈಲ್ವೆ ವಿಭಾಗ ವತಿಯಿಂದ 62ನೇ ರೈಲ್ವೆ ಸಪ್ತಾಹ ಸಮಾರಂಭ ನಡೆದಿದ್ದು, ಪ್ರಶಸ್ತಿ ವಿತರಿಸಲಾಯಿತು.

ಈ ಸಂದರ್ಭ  ಮೈಸೂರು ನೈರುತ್ಯ ರೈಲ್ವೆಯ ವಿಭಾಗೀಯ ಪ್ರಬಂಧಕ ಅತುಲ್ ಗುಪ್ತ, ಅಪರ ವಿಭಾಗೀಯ  ರೈಲ್ವೆ ಪ್ರಬಂಧಕ ಪಿ.ರಾಮ್, ಪ್ರಶಾಂತ್ ಮಸ್ತಿಹೊಳಿ, ಎಸ್.ಜಿ.ಯತೀಶ್, ವಿನಾಯಕ್ ಆರ್.ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ  ಉತ್ತಮ ಸೇವೆ ಸಲ್ಲಿಸಿದ ವಿವಿಧ ವಿಭಾಗಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಆಪರೇಟಿಂಗ್ ವಿಭಾಗ, ಇಂಜಿನಿಯರಿಂಗ್ ವಿಭಾಗ, ನಿಟ್ಟೂರು ರೈಲ್ವೆ ನಿಲ್ದಾಣ ಕ್ರಮವಾಗಿ ಪ್ರಶಸ್ತಿ ಸ್ವೀಕರಿಸಿವೆ. (ಎಸ್.ಎಚ್)

 

Leave a Reply

comments

Related Articles

error: