ಮೈಸೂರು

ರಾಜ್ ಕುಮಾರ್ ಹನ್ನೊಂದನೆ ಪುಣ್ಯತಿಥಿ ಆಚರಣೆ

ಮೈಸೂರು ಕನ್ನಡ ವೇದಿಕೆ ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿ ಬಳಗದಿಂದ ರಾಜ್ ಕುಮಾರ್ ರವರ 11 ನೇ ವರ್ಷದ ಪುಣ್ಯ ತಿಥಿ ಕಾರ್ಯಕ್ರಮವನ್ನು   ಹಮ್ಮಿಕೊಳ್ಳಲಾಗಿತ್ತು.

ನಗರದ ಅರಮನೆ ಮುಂಭಾಗದಲ್ಲಿರುವ ಡಾ.ರಾಜ್ ಕುಮಾರ್ ಉದ್ಯಾನವನದಲ್ಲಿ ವೇದಿಕೆ ಸದಸ್ಯರು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಅವರನ್ನು ಸ್ಮರಿಸಿದರು.

ಇದೇ ಸಂದರ್ಭ ಸಾಹಿತಿಗಳಾದ ಬನ್ನೂರ್ ಕೆ. ರಾಜು  ಸುದ್ದಿಗಾರರೊಂದಿಗೆ ಮಾತನಾಡಿ ಕನ್ನಡ ಚಿತ್ರ ರಂಗದಲ್ಲಿಯೇ ಅತ್ಯಂತ ಶ್ರೇಷ್ಠ ಕಲಾವಿದ, ಅವರ ನಟನೆ ಇಂದಿಗೂ ಜನ ಮಾನಸದಲ್ಲಿ ಉಳಿದುಕೊಂಡಿದೆ. ಅದ್ಭುತ ಕಲಾ ರಸಿಕ.  ಇವರ ನೆನಪಿಗಾಗಿ ಮೈಸೂರಿನಲ್ಲಿ ಒಂದು ಮ್ಯೂಜಿಯಂ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭ ವೇದಿಕೆ ಅಧ್ಯಕ್ಷ ಬಾಲಕೃಷ್ಣ,  ಧನಂಜಯ್, ನಾಲಾಬೀದಿ ರವಿ, ಹಾಗೂ ರಾಜ್ ಕುಮಾರ್ ಅಭಿಮಾನಿಗಳು ಹಾಜರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: