ಕರ್ನಾಟಕಮೈಸೂರು

ಹೃದಯವನ್ನು ಕಾಪಾಡಿಕೊಳ್ಳಿ: ನಗರದ ವಿವಿಧೆಡೆ ಹೃದಯ ಕುರಿತು ಅರಿವು ಜಾಥಾ

ಹೃದಯವು ದೇಹದ ಅತಿಮುಖ್ಯ ಅಂಗವಾಗಿದ್ದು ಇದಕ್ಕೇನಾದರೂ ಆದಲ್ಲಿ ಜೀವನವೇ ನಿಂತುಹೋಗುತ್ತದೆ. ಅದಕ್ಕಾಗಿ ನಮ್ಮ ದೇಹದಲ್ಲಿರುವ ಹೃದಯವನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕು.  ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಯುವರಾಜ ಯದುವೀರ ಕೃಷ್ಣದತ್ತ ಒಡೆಯರ್ ಹೇಳಿದರು.

ಮೈಸೂರಿನ ಕೋಟೆ ಆಂಜನೇಯ ದೇವಳದ ಎದುರು ಸಿದ್ದಾರ್ಥ ನಗರದ ಕಾವೇರಿ ಹಾರ್ಟ್ & ಮಲ್ಟಿ  ಸ್ಪೆಶಾಲಿಟಿ ಆಸ್ಪತ್ರೆಯು  ಗುರುವಾರ ವಿಶ್ವ ಹೃದಯ ದಿನದ ಅಂಗವಾಗಿ ಆಯೋಜಿಸಿದ ಅರಿವು ಜಾಥಾಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಜೆಎಸ್ ಎಸ್ ಆಸ್ಪತ್ರೆ ಹೃದ್ರೋಗ ವಿಭಾಗದ ವತಿಯಿಂದಲೂ ವಿಶ್ವ ಹೃದಯದಿನದ ಅಂಗವಾಗಿ ಜೆಎಸ್ ಎಸ್ ಹೃದಯಕ್ಷೇಮ ಬ್ಯಾನರ ಅಡಿ ಅರಿವು ಜಾಥಾ ಆಯೋಜಿಸಲಾಗಿತ್ತು.

ನಿಮ್ಮ ಜೀವಕ್ಕೆ ಬಲತುಂಬಿರಿ ಎನ್ನುವ ಉದ್ದೇಶವನ್ನಿಟ್ಟುಕೊಂಡು ನಡೆಸಿದ ಜಾಥಾದಲ್ಲಿ ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಜಾಥಾವು ಆಸ್ಪತ್ರೆಯ ಆವರಣದಲ್ಲಿ  ಆರಂಭಗೊಂಡು ಜೆಎಸ್ ಎಸ್ ಮಹಾವಿದ್ಯಾಪೀಠ, ಅರಮನೆ ದಕ್ಷಿಣ ದ್ವಾರ, ಎಂಸಿಸಿ ಸರ್ಕಲ್, ಸಂಸ್ಕೃತ ಕಾಲೇಜು, ಅಗ್ರಹಾರ ಸರ್ಕಲ್ ಮೂಲಕ ಸಾಗಿ ಮತ್ತೆ ಆಸ್ಪತ್ರೆ ಆವರಣದಲ್ಲೇ ಮುಕ್ತಾಯಗೊಂಡಿತು.

ಜೆಎಸ್ ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ನಿರ್ದೇಶಕ ಮಹೇಶ್.ಆರ್, ಜೆಎಸ್.ಎಸ್ ಆಸ್ಪತ್ರೆಯ ನಿರ್ದೇಶಕ ಎಂ.ಡಿ.ರವಿ, ಮುಖ್ಯ ಆಡಳಿತಾಧಿಕಾರಿ ಬಸವರಾಜ್ ಕುಪ್ಪಸದ, ಹೃದ್ರೋಗ ವಿಭಾಗದ ಡಾ.ನಾಗರಾಜ್ ದೇಸಾಯಿ, ಸರ್ಜರಿ ವಿಭಾಗದ ಡಾ.ಶ್ಯಾಂ ಪ್ರಸಾದ್ ಶೆಟ್ಟಿ, ಕಾರ್ಡಿಯೋಲಜಿ ವಿಭಾಗದ ಡಾ.ಮಂಜಪ್ಪ, ಡಾ.ಪ್ರಶಾಂತ ಕುಲಕರ್ಣಿ, ಡಾ.ಸುಜಯ್, ಡಾ.ಪೂರ್ಣಿಮಾ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ 500 ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಸುತ್ತೂರಿನಲ್ಲಿಯೂ ವಿಶ್ವ ಹೃದಯ ದಿನಾಚರಣೆ

ಜೆಎಸ್.ಎಸ್ ನ ಎನ್.ಸಿ.ಸಿ ಏರ್ ಫೋರ್ಸ್ ವಿಂಗ್ ವತಿಯಿಂದ ವಿಶ್ವ ಹೃದಯ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ಶಾಲೆಯ ಮುಖ್ಯೋಪಾಧ್ಯಾಯ ಜಿ.ಎಸ್.ಶಿವಮಲ್ಲು ಮಾತನಾಡಿ ಇಂದಿನ ಆಹಾರ ಶೈಲಿ, ಒತ್ತಡದ ಜೀವನ ಹಲವು ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ. ಅದಕ್ಕಾಗಿ ಅರಿವು ಮೂಡಿಸುವ ಅಗತ್ಯವಿದೆ. ಆರೋಗ್ಯಯುತ ಹವ್ಯಾಸವನ್ನು ಬೆಳೆಸಿಕೊಂಡು ಹೃದಯವನ್ನು ಕಾಪಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಯ ಸಂಯೋಜಕ ಜಿ.ಎಲ್.ತ್ರಿಪುರಾಂತಕ ಮಾತನಾಡಿ ಭಾರತದಲ್ಲಿ 40ವರ್ಷದೊಳಗಿನ ಶೇಕಡಾ 25ರಷ್ಟು ಮಂದಿಗೆ ಹೃದಯಾಘಾತ ಸಂಭವಿಸುತ್ತಿರುವುದು ಕಳವಳಕಾರಿಯಾಗಿದೆ. ಆರೋಗ್ಯಯುತರ ಸಂಪರ್ಕವು ನೆರೆಹೊರೆಯವರು ಮತ್ತು ಸ್ನೇಹಿತರನ್ನು ಅದೇ ನಿಟ್ಟಿನಲ್ಲಿ ಕೊಂಡೊಯ್ಯುತ್ತದೆ ಎಂದರು.

ಸಂಸ್ಥೆಯ ಮುಖ್ಯಸ್ಥ ಸಂಪತ್, ವೀರಭದ್ರಯ್ಯ, ಸಿ.ಪಿ.ನಿರ್ಮಲಾ, ಎನ್.ಸಿ.ಸಿ ಏರ್ ಫೋರ್ಸಿಂಗ್ ಆಫೀಸರ್ ಎಂ.ಜಿ.ಬಸವಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: