ಮೈಸೂರು

ನಮ್ಮ ನಡೆ ನಂಜುಂಡೇಶ್ವರನ ಕಡೆ ಹೆಸರಲ್ಲಿ ಪಾದಯಾತ್ರೆ

ಮೈಸೂರು,ಡಿ.7:- ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ನಂಜುಂಡೇಶ್ವರ ಪಾದಯಾತ್ರಾ ಸಮಿತಿ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಹಾಗೂ ಮಹಾಮಾರಿ ಕೋರೋನಾ ದೇಶ ಬಿಟ್ಟು ತೊಲಗಲಿ ಎಂದು ನಮ್ಮ ನಡೆ ನಂಜುಂಡೇಶ್ವರನ ಕಡೆ ಹೆಸರಿನಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ಮುಂಭಾಗದಿಂದ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ ತನಕ ಪಾದಯಾತ್ರೆ ಮೂಲಕ ದೇಶದ ಸಮಸ್ತ ನಾಗರಿಕರಿಗೂ ಭಗವಂತ ಒಳ್ಳೇದ್ ಮಾಡಲಿ ಎಂದು ವಿಶೇಷವಾಗಿ ಪಾದಯಾತ್ರೆ ಮಾಡಲಾಯಿತು.
ಪಾದಯಾತ್ರೆಯ ನೇತೃತ್ವ ವಹಿಸಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ನಿಜಕ್ಕೂ ನೀವು ಮಾಡುತ್ತಿರುವ ಈ ಪಾದಯಾತ್ರೆ ಯಾವುದೇ ತರಹದ ನಿರ್ವಿಘ್ನ ಬರದೆ ನೀವುಗಳು ಮುಂಜಾಗ್ರತೆ ಕ್ರಮ ವಹಿಸಿ ಪಾದಯಾತ್ರೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಹಾಗೆಯೇ ಸ್ವಾರ್ಥಕ್ಕಲ್ಲದೆ ದೇಶಕ್ಕಾಗಿ ನಿಮ್ಮ ತಂಡ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ಭರತ್ ,ನಜರ್ ಬಾದ್ ನಟರಾಜ್ ,ರಮೇಶ್ ಎಂ ರಾಜೇಶ್, ಪೈಲ್ವಾನ್ ಸುನೀಲ್, ಶೋಭಾ ರಾಜೇಶ್ ,ರಾಷ್ಟ್ರೀಯ ಮಹಿಳಾ ಪರಿಷತ್ ಅಧ್ಯಕ್ಷರಾದ ಶ್ವೇತ, ಜ್ಯೋತಿ ಹಾಗೂ ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: