ಪ್ರಮುಖ ಸುದ್ದಿ

ಒಂಭತ್ತು ತಿಂಗಳ ಬಳಿಕ ಚಾಮರಾಜ ನಗರದಿಂದ ತಿರುಪತಿಗೆ ಹೊರಟ ಎಕ್ಸಪ್ರೆಸ್ ರೈಲು

ರಾಜ್ಯ( ಚಾಮರಾಜನಗರ)ಡಿ.8:- ಚಾಮರಾಜ ನಗರದಿಂದ ಪ್ರತಿದಿನ ತಿರುಪತಿಗೆ ಸಂಚರಿಸುವ ತಿರುಪತಿ ಎಕ್ಸ್‌ಪ್ರೆಸ್‌ ರೈಲು ಒಂಭತ್ತು ತಿಂಗಳ ಬಳಿಕ ನಿನ್ನೆಯಿಂದ ಸಂಚಾರ ಆರಂಭಿಸಿದೆ.
ಟಿಕೆಟ್‌ ಕಾಯ್ದಿರಿಸಿದವರಿಗೆ ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ. ನಿನ್ನೆ ನಗರದಿಂದ ಒಬ್ಬರು ಮಾತ್ರ ಟಿಕೆಟ್‌ ಕಾಯ್ದಿರಿಸಿದ್ದರು. ಆದರೆ ಅವರು ಕೂಡ ಬಂದಿರಲಿಲ್ಲ. ಇದೇ ರೈಲು ಮೈಸೂರಿನಿಂದ ನಗರಕ್ಕೆ ಬರುವಾಗ ಮೂವರು ಪ್ರಯಾಣಿಕರಿದ್ದರು.

ವಿಶೇಷ ಎಕ್ಸ್‌ಪ್ರೆಸ್‌ ರೈಲು ಆಗಿರುವುದರಿಂದ ಪ್ರಯಾಣ ದರವೂ ಹೆಚ್ಚಿದೆ. ಸಾಮಾನ್ಯವಾಗಿ ಎಕ್ಸ್‌ ಪ್ರೆಸ್‌ ರೈಲಿಗೆ ನಗರದಿಂದ ಮೈಸೂರಿಗೆ ಟಿಕೆಟ್ ದರ 40 ರೂ. ಇದೆ. ಈ ಹತ್ತು ದಿನಗಳ ಕಾಲ, ಈ ರೈಲಿನಲ್ಲಿ ಸಂಚರಿಸಬೇಕಾದರೆ 70‌ರೂ. ತೆರಬೇಕು.

ಪ್ರಾಯೋಗಿಕವಾಗಿ 10 ದಿನಗಳ ಕಾಲ ರೈಲು ಸಂಚರಿಸಲಿದೆ. ನಂತರ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಸೇವೆ ಮುಂದುವರಿಯುವ ಸಾಧ್ಯತೆ ಇದೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲು‌ ಪ್ರತಿ ದಿನ ಮಧ್ಯಾಹ್ನ 3.10ಕ್ಕೆ ನಗರದಿಂದ ಹೊರಡುತ್ತದೆ. 2.40ರವರೆಗೂ ಟಿಕೆಟ್‌ ಕಾಯ್ದಿರಿಸಲು ಅವಕಾಶ ಇದೆ ಎಂದು ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಬುಧವಾರದಿಂದ ಪ‍್ರತಿ ದಿನ ಸಂಜೆ 5 ಗಂಟೆಗೆ ಮೈಸೂರಿಗೆ ಪ್ಯಾಸೆಂಜರ್‌ ರೈಲು ಸಂಚರಿಸಲಿದೆ. 18ರವರೆಗೆ ಈ ಸಂಚಾರ ಇರಲಿದೆ . ಟಿಕೆಟ್‌ ದರ ಈ ಹಿಂದಿನಂತೆ ( 20ರೂ) ಇರಲಿದೆ. ಆದರೆ, ಮಕ್ಕಳು, ಹಿರಿಯ ನಾಗರಿಕರಿಗೆ ರಿಯಾಯಿತಿ ದರ ಇರಲಿದೆ ಎಂದು ಹೇಳಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: