ಪ್ರಮುಖ ಸುದ್ದಿಮನರಂಜನೆ

ನಟಿ ಸಂಜನಾ ಗಲ್ರಾನಿಯವರ ಜಾಮೀನು ಅರ್ಜಿ ವಿಚಾರಣೆ ಡಿ.10ಕ್ಕೆ

ರಾಜ್ಯ(ಬೆಂಗಳೂರು)ಡಿ.8:- ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿಯವರ ಜಾಮೀನು ಅರ್ಜಿ ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ಮುಂದೂಡಲಾಗಿದೆ.

ಸಂಜನಾ ಅನಾರೋಗ್ಯದ ಕಾರಣ ನೀಡಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ “ಆರೋಪಿಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿ ಚಿಕಿತ್ಸೆ ಸಂಬಂಧ ಡಿಸೆಂಬರ್ 10ರ ಒಳಗೆ ವರದಿ ಕೊಡಿರಿ” ಎಂದು ಆದೇಶಿಸಿದೆ.

ಅಲ್ಲದೆ ಆ ವರದಿ ಬಂದ ನಂತರ ಜಾಮೀನಿನ ಬಗ್ಗೆ ನಿರ್ಧರಿಸೋಣ ಎಂದೂ ನ್ಯಾಯಾಲಯ ಹೇಳಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ಕಳೆದ ಎರಡೂವರೆ ತಿಂಗಳುಗಳಿನಿಂದ ಜೈಲಿನಲ್ಲಿದ್ದು ಜಾಮೀನಿಗಾಗಿ ಸತತ ಪ್ರಯತ್ನ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: