ಮೈಸೂರು

ಲಂಚ ಪಡೆಯುತ್ತಿದ್ದ ವೈದ್ಯ ಎಸಿಬಿ ಬಲೆಗೆ

ಮೂಳೆ ಶಸ್ತ್ರ ಚಿಕಿತ್ಸೆ ನೆರವೇರಿಸಲು ಕೆ.ಆರ್.ಆಸ್ಪತ್ರೆಯ  ವೈದ್ಯರೋರ್ವರು ಲಂಚ ಪಡೆಯುತ್ತಿದ್ದ ವೇಳೆ  ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದ ಘಟನೆ ನಡೆದಿದೆ.

ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಕೀಲು ಮತ್ತು ಮೂಳೆ ತಜ್ಞ ಡಾ.ಪುಟ್ಟಸ್ವಾಮಿ ಎಂಬವರೇ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದವರಾಗಿದ್ದಾರೆ. ಶಿವಕುಮಾರ್ ಎಂಬವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿತ್ತು. ಇದಕ್ಕಾಗಿ ಅವರ ಬಳಿ 30,000 ರೂ.ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಆದರೆ ಕೊನೆಯಲ್ಲಿ 26ಸಾವಿರ ರೂ.ನೀಡುವಂತೆ ಹೇಳಿದ್ದು, ಈ ಕುರಿತು ರೋಗಿ ಕಡೆಯವರು ಎಸಿಬಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಭ್ರಷ್ಟಾಚಾರ ನಿಗ್ರಹದಳ ಪೊಲೀಸರಿಗೆ  ಮಂಡಿಮೊಹಲ್ಲಾದಲ್ಲಿರುವ ಕ್ಲಿನಿಕ್ ನಲ್ಲಿ ಡಾ.ಪುಟ್ಟಸ್ವಾಮಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: