
ಮೈಸೂರು
ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಂಸ್ಮರಣ ಸಂಗೀತ ಕಾರ್ಯಕ್ರಮ
ಮೈಸೂರು,ಡಿ.8:- ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಇತ್ತೀಚೆಗೆ ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್ ನಿಂದ ಏರ್ಪಡಿಸಿದ್ದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಂಸ್ಮರಣ ಸಂಗೀತ ಕಾರ್ಯಕ್ರಮವನ್ನು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್. ವಿದ್ಯಾಶಂಕರ್ ಅವರು ಉದ್ಘಾಟಿಸಿದರು. ಚಾರುಲತಾ ರಾಮಾನುಜಂ, ತುಮಕೂರು ಬಿ. ರವಿಶಂಕರ್, ಮೈಸೂರು ಎಂ. ಮಂಜುನಾಥ್, ಡಾ. ಎಸ್. ಶಂಕರ್, ಜಿ.ಎಸ್. ರಾಮಾನುಜಂ, ಪ್ರೊ. ರಾಮಮೂರ್ತಿರಾವ್ ಉಪಸ್ಥಿತರಿದ್ದರು.
ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್ ನಿಂದ ಏರ್ಪಡಿಸಿದ್ದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಂಸ್ಮರಣ ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್ ಎಸ್. ಶಂಕರ್ರವರು ಗಾಯನ ಪ್ರಸ್ತುತ ಪಡಿಸಿದರು. ಪಕ್ಕವಾದ್ಯ ದಲ್ಲಿ ತುಮಕೂರು ಬಿ. ರವಿಶಂಕರ್, ಜಿ.ಎಸ್. ರಾಮಾನುಜಂ ಮತ್ತು ಚಾರುಲತಾ ರಾಮಾನುಜಂ ಸಹಕರಿಸಿದರು.(ಜಿ.ಕೆ,ಎಸ್.ಎಚ್)