ಮೈಸೂರು

ಎರಡೂ ಕ್ಷೇತ್ರಗಳಲ್ಲಿ ‘ಕೈ’ ಹಿಡಿದಿರುವ ಮತದಾರ :ಭಾರೀ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲುವು

ರಾಜ್ಯ ವಿಧಾನ ಸಭಾ ಚುನಾವಣೆಗೆ ವರ್ಷ ಬಾಕಿ ಇರುವಂತೆಯೇ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ಪ್ರತಿಷ್ಠೆ, ಬಲ ಪ್ರದರ್ಶನಕ್ಕೆ ವೇದಿಕೆ ಆಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ  ಉಪಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, ಎರಡೂ ಕ್ಷೇತ್ರಗಳಲ್ಲೂ ಮತದಾರ ‘ಕೈ’ ಹಿಡಿದಿದ್ದಾನೆ.  ಸ್ವಾಭಿಮಾನಕ್ಕೆ ಕೊಡಲಿಯೇಟು ಬಿದ್ದಿದೆ.  ಭಾರೀ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಳಲೆಕೇಶವ ಮೂರ್ತಿ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು 21,334 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಗೀತಾ ಮಹದೇವಪ್ರಸಾದ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ನಿರಂಜನ್ ಅವರನ್ನು 10,877 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ.

ಕಾಂಗ್ರೆಸ್- ಬಿಜೆಪಿ ಎಂಬುದಕ್ಕಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವಿನ ಜಿದ್ದಾಜಿದ್ದಿನಿಂದಲೇ ಕುತೂಹಲ ಕೆರಳಿಸಿದ್ದ ಈ ಫಲಿತಾಂಶ ಮುಂದಿನ ಹಾದಿಗೂ ನಿರ್ಣಾಯಕ  ಎಂದೇ ಹೇಳಲಾಗಿತ್ತು. ಇದೀಗ ಕುತೂಹಲಗಳಿಗೆ ತೆರೆ ಬಿದ್ದಿದ್ದು, ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ.

ಮೊದಲ ಹಂತದ ಮತ ಎಣಿಕೆಯಲ್ಲಿ ಕಳಲೇ ಕೇಶವಮೂರ್ತಿ 500 ಮತಗಳ ಮುನ್ನಡೆ ಸಾಧಿಸಿದ್ದರು. ಗುಂಡ್ಲುಪೇಟೆಯಲ್ಲಿಯೂ  ಕೈ ಮುನ್ನಡೆ ಸಾಧಿಸಿತ್ತು. ಮೊದಲ ಹಂತದ ಮತ ಎಣಿಕೆ ಮುಕ್ತಾಯದ ವೇಳೆ ಕೈ ಅಭ್ಯರ್ಥಿ ಕಳಲೇ  2301 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ 5875 ಮತಗಳನ್ನ ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗ 3574 ಮತಗಳನ್ನು ಪಡೆದಿದ್ದರು.
ಗುಂಡ್ಲುಪೇಟೆ ಯಲ್ಲೂ ಕಾಂಗ್ರೆಸ್ 1771 ಮತಗಳ ಮುನ್ನಡೆ ಸಾಧಿಸಿತ್ತು. 9544 ಮತಗಳಲ್ಲಿ 102 ಮತ ನೋಟಾ ಚಲಾವಣೆಯಾಗಿತ್ತು.
ನಂಜನಗೂಡಿನಲ್ಲಿ ಮೊದಲ ಹಂತದ ಮತಗಳಲ್ಲಿ 9544 ಮತಗಳು ಎಣಿಕೆಯಾಗಿತ್ತು. ಕೈ ಅಭ್ಯರ್ಥಿ ಕಳಲೇ ಕೇಶವ ಮೂರ್ತಿ 4712 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. 11524 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್  6812 ಮತಗಳನ್ನು ಪಡೆದಿದ್ದರು. 19000 ಸಾವಿರ ಮತಗಳ ಎಣಿಕೆ ನಡೆದಿದ್ದು, 209 ನೋಟಾ ಮತಗಳು ಚಲಾವಣೆಯಾಗಿವೆ.

ಮೂರನೇ ಹಂತದ ಮತ ಎಣಿಕೆ ಮುಕ್ತಾಯದ ವೇಳೆ, ಕೈ ಅಭ್ಯರ್ಥಿ ಕಳಲೆ ಕೇಶವಮೂರ್ತಿ 9233 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 18477 ಮತಗಳನ್ನು ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್  9244 ಮತಗಳು ಚಲಾವಣೆಯಾಗಿವೆ.
ಕಳಲೇ ಕೇಶವಮೂರ್ತಿ ಮುನ್ನಡೆ ಸಾಧಿಸಿದ್ದು, 28691 ಸಾವಿರ ಮತಗಳ ಎಣಿಕೆಯಾಗಿದ್ದು,
322ನೋಟಾ ಮತಗಳು ಚಲಾವಣೆಯಾಗಿವೆ.

ನಾಲ್ಕನೇ ಹಂತದ ಮತ ಏಣಿಕೆ ಮುಕ್ತಾಯದ ವೇಳೆ ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
10992 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 23595 ಮತಗಳನ್ನು ಕೈ ಅಭ್ಯರ್ಥಿ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 12603 ಮತಗಳು ಬಂದಿವೆ. ಒಟ್ಟು 37253 ಸಾವಿರ ಮತಗಳ ಎಣಿಕೆಯಾಗಿದ್ದು, 416 ನೋಟಾ ಮತಗಳು ನೋಟಾ ಚಲಾವಣೆಯಾಗಿವೆ.

5ನೇ ಹಂತದ ಮತ ಏಣಿಕೆ ಮುಕ್ತಾಯದ ವೇಳೆಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
12927 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರು.30061 ಮತಗಳನ್ನು ಪಡೆದರು.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 17134 ಮತಗಳನ್ನು ಪಡೆದಿದ್ದು,ಒಟ್ಟು 48636 ಸಾವಿರ ಮತಗಳ ಎಣಿಕೆಯಾಗಿದೆ. 563 ನೋಟಾ ಮತಗಳು ಚಲಾವಣೆಯಾಗಿವೆ. 5ನೇ
ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ  12927 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರು. 30061 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 17134 ಮತಗಳು ಲಭಿಸಿದ್ದು,  ಒಟ್ಟು 48636 ಸಾವಿರ ಮತಗಳ ಎಣಿಕೆ 563 ನೋಟಾ ಮತಗಳು ಚಲಾವಣೆಯಾಗಿವೆ.

6ನೇ ಹಂತದ ಮತ ಎಣಿಕೆ ಮುಕ್ತಾಯದ ವೇಳೆಯು ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
15585 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರು. 35936 ಮತಗಳನ್ನು   ಕಳಲೇ ಕೇಶವಮೂರ್ತಿ ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 203521 ಮತಗಳು.
ಒಟ್ಟು 58094 ಸಾವಿರ ಮತಗಳ ಎಣಿಕೆಯಾಗಿತ್ತು. 693 ನೋಟಾ ಮತಗಳು ಚಲಾವಣೆಯಾಗಿದ್ದವು.
6ನೇ ಹಂತದ ಮತ ಎಣಿಕೆ ಮುಕ್ತಾಯದ ವೇಳೆ ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
15585 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರು. ಕಳಲೇ ಕೇಶವಮೂರ್ತಿ 35936 ಮತಗಳನ್ನು ಪಡೆದರು.  ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 20351 ಮತಗಳನ್ನು ಪಡೆದರು. ಒಟ್ಟು 58094 ಸಾವಿರ ಮತಗಳ ಎಣಿಕೆಯಾಗಿದ್ದು. 693 ನೋಟಾ ಮತಗಳು ಚಲಾವಣೆಯಾಗಿವೆ.
7ನೇ ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು, ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
15896 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರು.41196 ಮತಗಳನ್ನು ಕಳಲೇ ಕೇಶವಮೂರ್ತಿ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 25300 ಮತಗಳು ಲಭಿಸಿವೆ. ಒಟ್ಟು 68688 ಸಾವಿರ ಮತಗಳ ಎಣಿಕೆಯಾಗಿದ್ದು, 818 ನೋಟಾ ಮತಗಳು ಚಲಾವಣೆಯಾಗಿವೆ.
8ನೇ ಹಂತದ ಮತ ಎಣಿಕೆ ಮುಕ್ತಾಯದ ವೇಳೆ ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
15709 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.44671 ಮತಗಳನ್ನು ಪಡೆದ ಕಳಲೇ ಕೇಶವಮೂರ್ತಿ ಪಡೆದಿದ್ದಾರೆ.ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 28962 ಮತಗಳು ಲಭಿಸಿವೆ.ಒಟ್ಟು 76064 ಸಾವಿರ ಮತಗಳ ಎಣಿಕೆಯಾಗಿದ್ದು. 890 ನೋಟಾ ಮತಗಳು ಚಲಾವಣೆಯಾಗಿವೆ.
9ನೇ ಹಂತದ ಮತ ಏಣಿಕೆ ಮುಕ್ತಾಯದ ವೇಳೆ ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
17416 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ನ49634 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 32218 ಮತಗಳು ಲಭಿಸಿವೆ. ಒಟ್ಟು 84615 ಸಾವಿರ ಮತಗಳ ಎಣಿಕೆ ನಡೆದಿದ್ದು, 995 ನೋಟಾ ಮತಗಳು ಚಲಾವಣೆಯಾಗಿವೆ.

10ನೇ ಹಂತದ ಮತ ಎಣಿಕೆ ಮುಕ್ತಾಯದ ವೇಳೆ ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
16645 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 53988 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 37343 ಮತಗಳು ಲಭಿಸಿವೆ.
ಒಟ್ಟು 94485 ಸಾವಿರ ಮತಗಳ ಎಣಿಕೆ ನಡೆದಿದ್ದು. 1103 ನೋಟಾ ಮತಗಳು ಚಲಾವಣೆಯಾಗಿವೆ.

11ನೇ ಹಂತದ ಮತ ಏಣಿಕೆ ಮುಕ್ತಾಯದ ವೇಳೆ ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
16316 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 58261 ಮತಗಳನ್ನು  ಕಳಲೇ ಕೇಶವಮೂರ್ತಿ ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 41945 ಮತಗಳು ಲಭಿಸಿವೆ. ಒಟ್ಟು 1,03729 ಸಾವಿರ ಮತಗಳ ಎಣಿಕೆ ನಡೆದಿದ್ದು, 1215 ನೋಟಾ ಮತಗಳು ಚಲಾವಣೆಯಾಗಿವೆ.

12ನೇ ಹಂತದ ಮತ ಏಣಿಕೆ ಮುಕ್ತಾಯದ ವೇಳೆ  ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
17560 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 63486 ಮತಗಳನ್ನು ಕಳಲೇ ಕೇಶವಮೂರ್ತಿ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 45926 ಮತಗಳು ಲಭಿಸಿವೆ. ಒಟ್ಟು 1,13,278 ಸಾವಿರ ಮತಗಳ ಎಣಿಕೆ ನಡೆದಿದ್ದು, 1283 ನೋಟಾ ಮತಗಳು ಚಲಾವಣೆಯಾಗಿವೆ.

13ನೇ ಹಂತದ ಮತ ಎಣಿಕೆ ಮುಕ್ತಾಯದ ವೇಳೆ  ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
18307 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು, 67922 ಮತಗಳನ್ನು ಕಳಲೇ ಕೇಶವಮೂರ್ತಿ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 49615 ಮತಗಳು ಲಭಿಸಿವೆ. ಒಟ್ಟು 1,21,633 ಸಾವಿರ ಮತಗಳ ಎಣಿಕೆ ನಡೆದಿದ್ದು, 1355 ನೋಟಾ ಮತಗಳು ಚಲಾವಣೆಯಾಗಿವೆ.

14ನೇ ಹಂತದ ಮತ ಎಣಿಕೆ ಮುಕ್ತಾಯದ ವೇಳೆ  ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
18169 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 72568 ಮತಗಳನ್ನು ಕೇಶವಮೂರ್ತಿ  ಪಡೆದರು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 54399 ಮತಗಳು ಲಭಿಸಿವೆ. ಒಟ್ಟು 1,31,397 ಸಾವಿರ ಮತಗಳ ಎಣಿಕೆ ನಡೆದಿದ್ದು,1442 ನೋಟಾ ಮತಗಳು ಚಲಾವಣೆಯಾಗಿವೆ.

15ನೇ ಹಂತದ ಮತ ಎಣಿಕೆ ಮುಕ್ತಾಯದ ವೇಳೆ ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
19228 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರು. 77372 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 58144 ಮತಗಳು ಲಭಿಸಿವೆ.
ಒಟ್ಟು 1,40,233 ಸಾವಿರ ಮತಗಳ ಎಣಿಕೆ ನಡೆದಿದ್ದು. 1526 ನೋಟಾ ಮತಗಳು ಚಲಾವಣೆಯಾಗಿವೆ
16ನೇ ಹಂತದ ಮತ ಎಣಿಕೆ ಮುಕ್ತಾಯದ ವೇಳೆ ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ
19611 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರು. 81795 ಮತಗಳನ್ನು ಪಡೆದರು.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 62184 ಮತಗಳು ಲಭಿಸಿವೆ. ಒಟ್ಟು 1,48,986 ಸಾವಿರ ಮತಗಳ ಎಣಿಕೆ ನಡೆದಿದ್ದು, 1588 ನೋಟಾ ಮತಗಳು ಚಲಾವಣೆಯಾಗಿವೆ.

ಕೊನೆಯ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆ  ಕೈ ಅಭ್ಯರ್ಥಿ ಕಳಲೇ ಕೇಶವಮೂರ್ತಿ 86212 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಗೆ 64878 ಮತಗಳು ಲಭಿಸಿವೆ. ಒಟ್ಟು 1,56,315 ಸಾವಿರ ಮತಗಳ ಎಣಿಕೆ ನಡೆದಿದ್ದು, 1665 ನೋಟಾ ಮತಗಳು ಚಲಾವಣೆಯಾಗಿವೆ. 21334 ಮತಗಳ ಅಂತರದಲ್ಲಿ ಕಳಲೇ ಕೇಶವಮೂರ್ತಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದ್ದು, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. (ಎಸ್.ಎನ್-ಎಸ್.ಎಚ್)

 

 

 

Leave a Reply

comments

Related Articles

error: