ಮೈಸೂರು

ಪೊಲೀಸ್ ಕಾನ್ಸಟೇಬಲ್ ಮೇಲಿನ ಹಲ್ಲೆ ಪ್ರಕರಣ : ಇಬ್ಬರ ಬಂಧನ

ಪ್ರಭಾಕರ

ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಮೂವರು ವ್ಯಕ್ತಿಗಳು ಕರ್ತವ್ಯ ನಿರತ ಪೊಲೀಸ್ ಕಾನ್ಸಟೇಬಲ್  ಮೇಲೆಯೇ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು  ಆರೋಪಿಗಳನ್ನು   ಬಂಧಿಸುವಲ್ಲಿ  ನಜರ್ ಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮೈಸೂರು ನಿವಾಸಿಗಳಾದ ಪ್ರಭಾಕರ, ಮಣಿಕಂಠ ಎಂದು ಗುರುತಿಸಲಾಗಿದೆ. ಮೈಸೂರಿನ ಉದಯಗಿರಿ  ಪೊಲೀಸ್ ಠಾಣೆಯ ಕಾನ್ಸಟೇಬಲ್ ಮಂಜುನಾಥ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದ್ದ ಎರಡು ಹಸುಗಳನ್ನು ನಗರಪಾಲಿಕೆಯ ದೊಡ್ಡಿಗೆ ತಂದು ಬಿಟ್ಟಿದ್ದಾರೆ. ಹಸುಗಳನ್ನು ತಂದಿದ್ದ ಟಾಟಾ ಏಸ್ ವಾಹನವನ್ನು ನಗರ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ನಿಲ್ಲಿಸಲು ಸಾಯಂಕಾಲ 4ರ ಸುಮಾರಿಗೆ ಬಂದಿದ್ದು, ಇದೇ ವೇಳೆ ರೇಸ್ ಕೋರ್ಸ್ ರಸ್ತೆಯಲ್ಲಿ ಹೋಗಿ ಬುಲೆವಾರ್ಡ್ ವೃತ್ತದಲ್ಲಿ ಬಲಕ್ಕೆ ತಿರುಗಲು ವಾಹನ ನಿಲ್ಲಿಸಿಕೊಂಡಿದ್ದಾಗ ಕುರುಬಾರಹಳ್ಳಿ ವೃತ್ತದ ಕಡೆಯಿಂದ ಮಹೀಂದ್ರ ಕಾರನ್ನು ಅಡ್ಡಾದಿಡ್ಡಿಯಾಗಿ ಹಾಗೂ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು ಕಾನ್ಸಟೇಬಲ್ ಮಂಜುನಾಥ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು,ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದರು. ಸ್ಥಳದಲ್ಲಿದ್ದ ಸಾರ್ವಜನಿಕರು ಅವರನ್ನು ರಕ್ಷಿಸಿದ್ದರು. ಈ ಕುರಿತು ನಜರ್ ಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: