ಕರ್ನಾಟಕಪ್ರಮುಖ ಸುದ್ದಿ

ಮಂಗಳೂರಿಗೆ ಇಂಡಿಗೊ ವಿಮಾನಯಾನ ಸೇವೆ ; ಮುಂಬೈ, ಬೆಂಗಳೂರಿಗೆ ಸಂಪರ್ಕ

ಮಂಗಳೂರು : ಮೇ 1 ರಿಂದ ಮುಂಬೈ ಹಾಗೂ ಬೆಂಗಳೂರಿಗೆ ಮಂಗಳೂರಿನಿಂದ ವಿಮಾನಯಾನ ಸೇವೆ ಆರಂಭಿಸುವುದಾಗಿ ಇಂಡಿಗೋ ಅಧ್ಯಕ್ಷ ಆದಿತ್ಯ ಘೋಷ್ ಅವರು ಬುಧವಾರ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಗಳೂರಿನಿಂದ ಮಂಗಳೂರಿಗೆ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಸಂಸ್ಥೆಯ ವತಿಯಿಂದ ನಿತ್ಯ ಎರಡು ಬಾರಿ ವಿಮಾನ ಯಾನ ಸೇವೆ ಒದಗಿಸಲಾಗುವುದು. ಮಂಗಳೂರಿನಿಂದ ಮುಂಬೈಗೆ ಮತ್ತು ಮುಂಬೈನಿಂದ ಮಂಗಳೂರಿಗೆ ಒಂದು ವಿಮಾನ ಸಂಚರಿಸಲಿದೆ. ಮಂಗಳೂರಿನಿಂದ ಬೆಂಗಳೂರಿಗೆ ರೂ.1,499 ಹಾಗೂ ಮಂಗಳೂರಿನಿಂದ ಮುಂಬೈಗೆ ರೂ.1,799 ಆರಂಭಿಕ ದರವನ್ನು ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

(ಎನ್‍.ಬಿ.ಎನ್‍)

Leave a Reply

comments

Related Articles

error: