ಮೈಸೂರು

ಲಂಚಮುಕ್ತ ಭಾರತಕ್ಕಾಗಿ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಡಿ.9:- ಡಿ.9ರ ವಿಶ್ವಭ್ರಷ್ಟಾಚಾರ ವಿರೋಧಿ ದಿನದಂದು ಲಂಚಮುಕ್ತ ಭಾರತಕ್ಕಾಗಿ ಒತ್ತಾಯಿಸಿ ಭ್ರಷ್ಟಾಚಾರ ನಿರ್ಮೂಲನ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಜಿಲ್ಲಾ ನ್ಯಾಯಾಲಯದ ಎದುರಿರುವ ಗಾಂಧಿ ಪ್ರತಿಮೆ ಬಳಿ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಲಂಚಮುಕ್ತ ದೇಶ ನಿರ್ಮಾಣವಾಗಬೇಕೆಂದರೆ ಸರ್ಕಾರದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಂದ ಸಾಧ್ಯವಿಲ್ಲ. ಭ್ರಷ್ಟಾಚಾರಕ್ಕೆ ಮೂಲ ಕಾರಣ ಜನರಲ್ಲಿ ಇರುವ ಅತಿಯಾದ ಆಸೆ ಮತ್ತು ಉದ್ದೇಶವಾಗಿರುತ್ತದೆ. ನಾಗರೀಕರು ಸ್ವಾರ್ಥದ ಆಸೆಯಿಂದ ದೂರವಾಗಿ ಪ್ರಾಮಾಣಿಕ ಜೀವನವನ್ನು ನಡೆಸಿದಲ್ಲಿ ಭ್ರಷ್ಟಾಚಾರವನ್ನು ಭಾರತದಿಂದ ತೊಲಗಿಸಬಹುದು. ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಕಂಡು ಬಂದಾಗ ನಾಗರೀಕರು ಪ್ರಶ್ನಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಭ್ರಷ್ಟಾಚಾರಕ್ಕೆ ಹೊಣೆಗಾರರು ನಾಗರೀಕರೇ ಆಗಿರುತ್ತಾರೆ. ಓಟಿಗಾಗಿ ನೋಟು ಪಡೆಯುವುದೇ ಭ್ರಷ್ಟಾಚಾರ ರಕ್ತಬೀಜಾಸುರರ ಹುಟ್ಟಿಗೆ ಕಾರಣವಾಗುತ್ತದೆ. ಆದ್ದರಿಂದ ದೇಶದಲ್ಲಿ ಯಾರೂ ಭ್ರಷ್ಟಾಚಾರದಲ್ಲಿ ತೊಡಗದಂತೆ ಜನಜಾಗೃತಿಯಲ್ಲಿ ತೊಡಗಿಸಬೇಕೆಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಧಾನ ಸಂಚಾಲಕ ರಾಜೇಶ್ ಗಡಿ, ಸಹಸಂಚಾಲಕ ಗಧಾಧರ, ಸಮಿತಿಯ ಸದಸ್ಯರುಗಳಾದ ಡೈರಿವೆಂಕಟೇಶ್, ಶಶಿಧರ್ ಸಂಗಾಪುರ, ರಾಜ್ ಗೋಪಾಲ್, ಧನ್ ಪಾಲ್, ಗುರುರಾಜ್, ಸಾರಂಗಪಾಣಿ, ಮತ್ತಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: