ಪ್ರಮುಖ ಸುದ್ದಿಮೈಸೂರು

ಮತ್ತೆ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ

ಮತ್ತೆ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ

ಕಳೆದೆರಡು ದಿನಗಳಿಂದ ಮೈಸೂರು ಜಿಲ್ಲೆಯಲ್ಲಿ ತುಂತುರು ಮಳೆಯಾಗಿದ್ದು ಇಲ್ಲಿನ ಜನತೆಗೆ ತಂಪೆರೆದಿತ್ತು. ಇದೀಗ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 4ರವರೆಗೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ನಾಗನಹಳ್ಳಿ ಸಂಶೋಧನಾ ಕೇಂದ್ರದ ಹೇಳಿಕೆಯ ಅನುಸಾರ  ಜಿಲ್ಲೆಯಲ್ಲಿ ಇಂದಿನ ಉಷ್ಣಾಂಶ 28ರಿಂದ 29ಡಿಗ್ರಿ ಸೆಲ್ಶಿಯಸ್, ರಾತ್ರಿಯ ಉಷ್ಣಾಂಶ 19ರಿಂದ 20ಡಿಗ್ರಿ ಸೆಲ್ಶಿಯಸ್ ನಿರೀಕ್ಷಿಸಬಹುದು. ಬೆಳಗಿನ ವೇಳೆಯ ತೇವಾಂಶ 96ರಿಂದ98 ಪರ್ಸೆಂಟ್, ಮಧ್ಯಾಹ್ನದ ನಂತರ ತೇವಾಂಶ 41ರಿಂದ 70ಪರ್ಸೆಂಟ್ ನಿರೀಕ್ಷಿಸಬಹುದು. ಗಾಳಿಯ ವೇಗ  ಗಂಟೆಗೆ 4ರಿಂದ 6ಕಿ.ಮೀ.

ಭತ್ತದ ಗದ್ದೆಗೆ ರೆಕ್ಕೆ ಹುಳುಗಳು ಬೀಳುವ ಸಾಧ್ಯತೆ ಇದ್ದು ಕ್ಲೋರೋಪೈರಿಪೋಸ್ 20EC, 2ಎಂ.ಎಲ್.ದ್ರಾವಣವನ್ನು ಒಂದು ಲೀಟರ್ ನೀರಿನೊಂದಿಗೆ ಸೇರಿಸಿ ಸಿಂಪಡಿಸಿದರೆ ಕೀಟಭಾದೆಯನ್ನು ತಡೆಯಬಹುದಾಗಿದೆ. ಮೋಡಕವಿದ ವಾತಾವರಣ, ಬಿರುಸುಗಾಳಿಯಿಂದ ಫಸಲು ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಇದರಿಂದ ಮುಕ್ತಿ ಪಡೆಯಲು ಒಂದು ಲೀಟರ್ ನೀರಿಗೆ 0.6ಗ್ರಾಂ ಟ್ರೈಸಿಕ್ಲೋವ್ಜಲ್ ದ್ರಾವಣವನ್ನು ಸಿಂಪಡಿಸಬಹುದು.

ಮುಂದಿನ ಐದು ದಿನಗಳಲ್ಲಿ ಸಾಧಾರಣ ಮಳೆಯಾಗಲಿದ್ದು ರೈತರು ಈ ಸಂದರ್ಭ ಬಿತ್ತನೆ ನಡೆಸಬಹುದಾಗಿದೆ. ರಾಗಿ, ಜೋಳ, ಅವರೆ ಬೀಜಗಳನ್ನು ಬಿತ್ತ ಬಹುದಾಗಿದ್ದು, ಬೀಜಗಳಿಗಾಗಿ ಮೈಸೂರಿನ ಎನ್ ಜಿಓ ಸಹಜ ಸಮೃದ್ಧಿಯನ್ನು ಸಂಪರ್ಕಿಸಬಹುದಾಗಿದೆ.

ಹವಾಮಾನ ಮುನ್ಸೂಚನೆ –ಮುಂದಿನ ಐದು ದಿನ ಮಳೆ (ಸೆಪ್ಟೆಂಬರ್ 30ರಿಂದ ಅಕ್ಟೋಬರ್ 4ರವರೆಗೆ )

 

ಪಾರಾಮೀಟರ್ 30.09.2016 01.10.2016 02.10.2016 03.10.2016 04.10.2016
ಮಳೆ(ಮಿ.ಮೀಗಳಲ್ಲಿ) 6 3 2 3 2
ಗರಿಷ್ಠ ಉಷ್ಣಾಂಶ ಡಿ.ಸೆ. 28 29 29 28 29
ಕನಿಷ್ಠ ಉಷ್ಣಾಂಶ ಡಿ.ಸೆ 19 20 20 19 19
ಆಕಾಶದ ಸ್ಥಿತಿ 8 5 5 7 8
ತೇವಾಂಶ(%)0830ಗಂಟೆಗಳಲ್ಲಿ 97 97 98 98 96
ತೇವಾಂಶ(%)1730ಗಂಟೆಗಳಲ್ಲಿ 70 61 53 47 41
ಗಾಳಿಯ ವೇಗ 6 6 4 4 4
ಗಾಳಿಯ ದಿಕ್ಕು 250 250 260 270 260

Leave a Reply

comments

Related Articles

error: