ಮೈಸೂರು

ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ : 3,10,000ರೂ. ಮೌಲ್ಯದ 09 ದ್ವಿಚಕ್ರ ವಾಹನಗಳ ವಶ

ಮೈಸೂರು,ಡಿ.10:- ಮಂಡಿ ಠಾಣೆಯಲ್ಲಿ ವರದಿಯಾದ ವಾಹನ ಕಳುವು ಪ್ರಕರಣಗಳ ಪತ್ತೆ ಸಂಬಂಧ ಮಂಡಿ ಪೊಲೀಸರು 08/12/2020 ರಂದು ಸಂಜೆ 4 ಗಂಟೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಪುಲಿಕೇಶಿ ರಸ್ತೆಯ ಕಬರ್ ಸ್ಥಾನ ಜಂಕ್ಷನ್ ಬಳಿ ವಾಹನ ಕಳುವು ಮಾಡುತ್ತಿದ್ದ ವ್ಯಕ್ತಿಗಳಿಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಸೀಂ ಪಾಷ ಬಿನ್ ಅಬ್ದುಲ್ ಕರೀಂ, (22), ಮನೆ ನಂ ಎಸ್-3, 7ನೇ ಬ್ಲಾಕ್, ನರ್ಮ್, ಅಪಾರ್ಟ್ ಮೆಂಟ್ ಸೆಲೂಷನ್ ಪಾರ್ಕ್ ಹತ್ತಿರ, ಕಲ್ಯಾಣಗಿರಿ ನಗರ, ಮೈಸೂರು, ಸಂದೀಪ್ ಅಲಿಯಾಸ್ ದುರ್ಗ ಸಂದೀಪ್ ಬಿನ್ ಚಂದ್ರಶೇಖರ್, (20), ಮನೆ ನಂ 133, ಲಿಡ್ ಕರ್ ಕಾಲೋನಿ, ಸಾತಗಳ್ಳಿ ಬಸ್ ನಿಲ್ದಾಣದ ಪಕ್ಕ, ರಾಜೀವ್ ನಗರ, ಮೈಸೂರು ಎಂದು ಹೇಳಲಾಗಿದೆ.
ಇವರನ್ನು ಬಂಧಿಸಿ ಮಂಡಿ ಠಾಣಾ ವಾಹನ ಕಳುವು ಪ್ರಕರಣಕ್ಕೆ ಸಂಬಂಧಪಟ್ಟ ಒಂದು ದ್ವಿ ಚಕ್ರ ವಾಹನದ ಸಮೇತ ವಶಕ್ಕೆ ಪಡೆದು , ವಿಚಾರಣೆ ಮಾಡಲಾಗಿ ಇಬ್ಬರು ಆರೋಪಿಗಳು ಸೇರಿ ಈ ದ್ವಿಚಕ್ರ ವಾಹನವನ್ನು ಮಂಡಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾಗಿ ತಿಳಿಸಿರುತ್ತಾರೆ. ಆರೋಪಿಗಳನ್ನು ಠಾಣೆಗೆ ಕರೆತಂದು ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ಆರೋಪಿ-1 ವಸೀಂ ಪಾಷ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 04 ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿ-2 ಸಂದೀಪ್ @ ದುರ್ಗಸಂದೀಪ್ ಈತನು ಶ್ರೀರಂಗಪಟ್ಟಣ ಟೌನ್, ಜಯಲಕ್ಷ್ಮಿಪುರಂ, ಕುವೆಂಪುನಗರ, ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ತಾಲಾ ಒಂದೊಂದು ಹೊಂಡಾ ಡಿಯೋ ಸ್ಕೂಟರ್ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಆರೋಪಿಗಳಿಂದ ಒಟ್ಟು 3,10,000ರೂ. ಮೌಲ್ಯದ ಒಟ್ಟು 09 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ) ಅವರಾದ ಗೀತಪ್ರಸನ್ನ , ನರಸಿಂಹರಾಜ ವಿಭಾಗದ ಎ.ಸಿ.ಪಿ. ಶಿವಶಂಕರ್.ಎಂ ಅವರುಗಳ ಮಾರ್ಗದರ್ಶನದಲ್ಲಿ ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ನಾರಾಯಣಸ್ವಾಮಿ.ವಿ, ಪಿ.ಎಸ್.ಐ ಶಭರೀಶ. ವಿ.ಆರ್ ಎ.ಎಸ್.ಐ, ಕೆ.ಎಸ್.ಗುರುಸ್ವಾಮಿ ಸಿಬ್ಬಂದಿಗಳಾದ ಜಯಪಾಲ, ಎಲಿಯಾಸ್.ಎಂ, ಜಯಕುಮಾರ್, ರವಿಗೌಡ, ಶಂಕರ ಟಿ ಬಂಡಿವಡ್ಡರ್, ಮತ್ತು ಕರಿಯಪ್ಪ ಅವರುಗಳು ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: