ಕರ್ನಾಟಕಪ್ರಮುಖ ಸುದ್ದಿಮೈಸೂರು

ಜೆಡಿಎಸ್ ಒಂದು ನಾಟಕ ಕಂಪನಿ : ಕುರುಬೂರು ಶಾಂತಕುಮಾರ್ ಕಿಡಿ

ಬೆಂಗಳೂರು/ ಮೈಸೂರು,ಡಿ.10:- ಭೂ ಸುಧಾರಣಾ ಕಾಯ್ದೆಗೆ ಬೆಂಬಲ ನೀಡಿದ ಹಿನ್ನೆಲೆ ಜೆಡಿಎಸ್ ವಿರುದ್ಧ ರೈತ ಮುಖಂಡ ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಜೆಡಿಎಸ್ ಒಂದು ನಾಟಕ ಕಂಪನಿ. ಹೆಚ್.ಡಿ ಕುಮಾರಸ್ವಾಮಿ ಆ ನಾಟಕ ಕಂಪನಿಯ ಮುಖ್ಯಸ್ಥ. ಕುಮಾರಸ್ವಾಮಿ ರಾತ್ರಿ ಬಣ್ಣ ಹಚ್ಚಿದಾಗ ಒಂದು ರೀತಿ ಮಾತನಾಡುತ್ತಾರೆ. ಬೆಳಿಗ್ಗೆ ಬಣ್ಣ ಹಚ್ಚಿದಾಗ ಒಂದು ರೀತಿ ಮಾತನಾಡುತ್ತಾರೆ ಎಂದು ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಅವರ ಡೈಲಾಗ್ ಗಳಿಗೆ ಹೆದರುವುದಿಲ್ಲ. ಕುಮಾರಸ್ವಾಮಿ ಅವರು ರೈತರ ಬಗ್ಗೆ ಹಗುರವಾಗಿ ಮಾತನಾಡಬಾರದು. ಮುಂದೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಇದು ಹೆಚ್.ಡಿ ಕುಮಾರಸ್ವಾಮಿಯವರಿಗೆ ಎಚ್ಚರಿಕೆಯ ಘಂಟೆ ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: