ಕ್ರೀಡೆಪ್ರಮುಖ ಸುದ್ದಿ

ಅಂತರರಾಷ್ಟ್ರೀಯ ಇಟಾಲಿಯನ್ ಫುಟ್ಬಾಲ್ ಆಟಗಾರ, ವಿಶ್ವಕಪ್ ವಿಜೇತ ಪಾವೊಲೊ ರೊಸ್ಸಿ ನಿಧನ

ದೇಶ(ನವದೆಹಲಿ)ಡಿ.10 :- ಇಟಾಲಿಯನ್ ಸ್ಟಾರ್ ಫುಟ್ಬಾಲ್ ಆಟಗಾರ ಮತ್ತು 1982 ರ ವಿಶ್ವಕಪ್ ವಿಜೇತ ಪಾವೊಲೊ ರೊಸ್ಸಿ ತಮ್ಮ 64 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಜುವೆಯಲ್ಲಿ ನಾಲ್ಕು ವರ್ಷಗಳಲ್ಲಿ ರೊಸ್ಸಿ ಎರಡು ಸೀರಿ ಎ ಪ್ರಶಸ್ತಿಗಳನ್ನು, ಯುರೋಪಿಯನ್ ಕಪ್ ಮತ್ತು ಕೊಪ್ಪಾ ಇಟಾಲಿಯಾ ಕಪ್ ಗೆದ್ದಿದ್ದಾರೆ. ರೊಸ್ಸಿ 1977-1986ರವರೆಗೆ ಇಟಾಲಿಯನ್ ರಾಷ್ಟ್ರೀಯ ತಂಡಕ್ಕಾಗಿ ಒಟ್ಟು 20 ಗೋಲುಗಳನ್ನು ಹೊಡೆದಿದ್ದು, 338 ಕ್ಲಬ್ ಪಂದ್ಯಗಳಲ್ಲಿ 134 ಗೋಲುಗಳನ್ನು ಹೊಡೆದಿದ್ದಾರೆ. ಪಾವೊಲೊ ರೊಸ್ಸಿಯನ್ನು ಅವರ ಸಮಯದ ಅತ್ಯುತ್ತಮ ಫಾರ್ವರ್ಡ್ ಎಂದು ಪರಿಗಣಿಸಲಾಗಿತ್ತು. ರೊಸ್ಸಿ ಇಟಲಿ ಪರ 48 ಪಂದ್ಯಗಳನ್ನು ಆಡಿದ್ದಾರೆ.
ರಾಯ್ ಸ್ಪೋರ್ಟ್ಸ್ನಲ್ಲಿ ಪಾವೊಲೊ ರೊಸ್ಸಿ ಕ್ರೀಡೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ‘ಇದೊಂದು ಆಘಾತಕಾರಿ ಮತ್ತು ಬೇಸರದ ಸಂಗತಿ. ಪಾವೊಲೊ ರೊಸ್ಸಿ ನಮ್ಮನ್ನಗಲಿದ್ದಾರೆ ಎಂದು ರಾಯ್ ಸ್ಪೋರ್ಟ್ಸ್ ನಿರೂಪಕ ಎನ್ರಿಕೊ ವರ್ರಿಯೇಲ್ ಹೇಳಿದ್ದಾರೆ.
ಪಾವೊಲೊ ಅವರನ್ನು ಮರೆಯಲಾಗದು. 1982ರ ವಿಶ್ವಕಪ್ ಪಂದ್ಯದಲ್ಲಿ ನಾವೆಲ್ಲರೂ ಅವರನ್ನು ಪ್ರೀತಿಸುವಂತೆ ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ರಾಯ್ ಜೊತೆ ನನ್ನ ಸಹೋದ್ಯೂಗಿಯೂ ಆಗಿದ್ದರು ಎಂದು ಎನ್ರಿಕೊ ತಿಳಿಸಿದ್ದಾರೆ. ರೊಸ್ಸಿ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: