ಕ್ರೀಡೆದೇಶ

India vs England: ಫೆಬ್ರವರಿಯಲ್ಲಿಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ : 12 ರಲ್ಲಿ ಏಳು ಪಂದ್ಯಗಳು ಮೊಟೆರಾ ಕ್ರೀಡಾಂಗಣದಲ್ಲಿ

ದೇಶ(ನವದೆಹಲಿ)ಡಿ.11:- 2021ರ ಫೆಬ್ರವರಿ-ಮಾರ್ಚ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ತಮ್ಮ ಭಾರತ ಪ್ರವಾಸದಲ್ಲಿ 12 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.
ಅಹಮದಾಬಾದ್‌ನ ಹೊಸ ಸರ್ದಾರ್ ಪಟೇಲ್ ಮೊಟೆರಾ ಕ್ರೀಡಾಂಗಣದಲ್ಲಿ 12 ಪಂದ್ಯಗಳಲ್ಲಿ ಏಳು ಪಂದ್ಯ ನಡೆಯಲಿದೆ. ಮೊಟೆರಾ ಕ್ರೀಡಾಂಗಣದಲ್ಲಿ ಪಂದ್ಯದ ಆತಿಥ್ಯವನ್ನು ವಹಿಸಲಿದೆ. ಈ ಕ್ರೀಡಾಂಗಣದಲ್ಲಿ ಫೆಬ್ರವರಿ 24 ರಿಂದ 28 ರವರೆಗೆ ಭಾರತವು ಇಂಗ್ಲೆಂಡ್‌ನೊಂದಿಗೆ ಟೆಸ್ಟ್ ಪಂದ್ಯವನ್ನು ಗುಲಾಬಿ ಚೆಂಡಿನೊಂದಿಗೆ ಆಡಲಿದೆ.
ಉಭಯ ತಂಡಗಳ ನಡುವೆ ಆಡುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇದಾಗಿದೆ. ಇಂಗ್ಲೆಂಡ್‌ನ ಭಾರತ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಈ ಸರಣಿಯಲ್ಲಿ ನಾಲ್ಕು ಟೆಸ್ಟ್, ಐದು ಟಿ 20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಾಗುವುದು. ಈ ಎಲ್ಲಾ ಪಂದ್ಯಗಳು ಚೆನ್ನೈ, ಅಹಮದಾಬಾದ್ ಮತ್ತು ಪುಣೆಯಲ್ಲಿ ನಡೆಯಲಿವೆ.

ಶ್ರೀಲಂಕಾ ಜೊತೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದ ನಂತರ ಇಂಗ್ಲೆಂಡ್ ತಂಡ ನೇರವಾಗಿ ಭಾರತಕ್ಕೆ ಭೇಟಿ ನೀಡಲಿದೆ. ಭಾರತ ಪ್ರವಾಸದಲ್ಲಿ, ಅವರು ವಿಶ್ವ ಟೆಸ್ಟ್ ಚಾಂಪಿಯನ್ ‌ಶಿಪ್‌ನ ಭಾಗವಾಗಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದಾರೆ. ಟೆಸ್ಟ್ ಚಾಂಪಿಯನ್‌ ಶಿಪ್ ಅಡಿಯಲ್ಲಿ, ಉಭಯ ತಂಡಗಳ ನಡುವೆ ಅಂತಿಮ ಸರಣಿ ನಡೆಯಲಿದ್ದು, ಟೆಸ್ಟ್ ಚಾಂಪಿಯನ್ ‌ಶಿಪ್‌ನ ಫೈನಲ್ ಪಂದ್ಯವು ಜೂನ್‌ನಲ್ಲಿ ಲಾರ್ಡ್ಸ್ ‌ನಲ್ಲಿ ನಡೆಯಲಿದೆ.
ಮೊಟೆರಾ ಕ್ರೀಡಾಂಗಣವು ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಟಿ 20 ಸರಣಿಯ ಆತಿಥ್ಯ ವಹಿಸಲಿದೆ, ಜೊತೆಗೆ ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯಗಳ ಆತಿಥ್ಯವನ್ನೂ ವಹಿಸಲಿದೆ. ಕ್ರೀಡಾಂಗಣವು 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೂ ಮೊದಲು ಭಾರತ ಕಳೆದ ವರ್ಷ ನವೆಂಬರ್‌ ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ಡೇ &ನೈಟ್ ಟೆಸ್ಟ್ ಆಡಿದೆ.
ಟೆಸ್ಟ್ ಸರಣಿಯೊಂದಿಗೆ ಇಂಗ್ಲೆಂಡ್ ಭಾರತ ಪ್ರವಾಸ ಪ್ರಾರಂಭವಾಗಲಿದೆ. ಮೊದಲ ಟೆಸ್ಟ್ ಫೆಬ್ರವರಿ 5 ರಿಂದ ಫೆಬ್ರವರಿ 9 ರವರೆಗೆ ಚೆನ್ನೈನಲ್ಲಿ ನಡೆಯಲಿದೆ. ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣವು ಮೊದಲ ಪಂದ್ಯದ ಜೊತೆಗೆ ಎರಡನೇ ಟೆಸ್ಟ್ ಪಂದ್ಯದ ಆತಿಥ್ಯವಹಿಸಲಿದೆ. ಎರಡನೇ ಟೆಸ್ಟ್ ಫೆಬ್ರವರಿ 13 ರಿಂದ 17 ರವರೆಗೆ ನಡೆಯಲಿದೆ. ಮೂರನೇ ಟೆಸ್ಟ್ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ನಾಲ್ಕನೇ ಟೆಸ್ಟ್ ಮಾರ್ಚ್ 4-8ರ ನಡುವೆ ವಿಶ್ವದ ಅತಿದೊಡ್ಡ ಕ್ರೀಡಾಂಗಣ – ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟಿ 20 ಸರಣಿ ಮಾರ್ಚ್ 12 ರಿಂದ ಪ್ರಾರಂಭವಾಗಲಿದೆ. ಉಳಿದ ಟಿ 20 ಪಂದ್ಯಗಳು ಮಾರ್ಚ್ 14, 16, 18 ಮತ್ತು 20 ರಂದು ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಮೊಟೆರಾದಲ್ಲಿ ನಡೆಯಲಿವೆ, ಆದ್ದರಿಂದ ಈ ಹೊಸ ಭವ್ಯ ಕ್ರೀಡಾಂಗಣವು ಎರಡೂ ತಂಡಗಳಿಗೆ ಬಯೊ ಬಬಲ್ ಆಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಒಂದು ವಿಷಯ.
ಅದೇ ರೀತಿ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಕ್ರೀಡಾಂಗಣ ಏಕದಿನ ಸರಣಿಗೆ ಬಯೋ ಬಬಲ್ ಆಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳು ಮಾರ್ಚ್ 23, 26 ಮತ್ತು 28 ರಂದು ಈ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೋವಿಡ್ -19 ರ ನಂತರ ಮೊದಲ ಬಾರಿಗೆ ಭಾರತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಸಾಂಕ್ರಾಮಿಕ ರೋಗದಿಂದಾಗಿ, ಈ ಬಾರಿ ಐಪಿಎಲ್ ಅನ್ನು ಭಾರತದ ಹೊರಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ಆಯೋಜಿಸಲಾಗಿತ್ತು.
(ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: