ಮೈಸೂರು

ಮೊಬೈಲ್ ಟವರ್ ಗಳನ್ನು ಅಳವಡಿಸಲು ನಿಗದಿತ ಶುಲ್ಕ ಪಾವತಿಸಿ ನೊಂದಣಿ ಮಾಡಿಸಿಕೊಳ್ಳಿ : ತಪ್ಪಿದಲ್ಲಿ ಸೂಕ್ತ ಕ್ರಮ : ಗುರುದತ್ ಹೆಗಡೆ

ಮೈಸೂರು,ಡಿ.11:- ಮೊಬೈಲ್ ಟವರ್ ಗಳನ್ನು ಅಳವಡಿಸಲು ನಿಗದಿತ ಶುಲ್ಕ ಪಾವತಿಸಿ ಮೂರು ತಿಂಗಳ ಒಳಗಾಗಿ ನೋಂದಣಿ ಮಾಡಿಕೊಳ್ಳುವಂತೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಜಿಯೋ, ಏರಟೆಲ್, ವೋಡಾಫೋನ್, ಐಡಿಯಾ, ಬಿಎಸ್ ಎನ್ ಎಲ್ ಸೇರಿದಂತೆ ವಿವಿಧ ದೂರವಾಣಿ ಮತ್ತು ಮೊಬೈಲ್ ಕಂಪೆನಿಗಳು ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶುಲ್ಕ ಪಾವತಿಸದೇ ಅನಧಿಕೃತ ಮೊಬೈಲ್ ಟವರ್ ಗಳನ್ನು ಅಳವಡಿಸಿರುವುದು ಕಂಡು ಬಂದಿದೆ.
2019ರ ಮೇ 29ರ ಅಧಿಸೂಚನೆಯಂತೆ ಹಾಗೂ ಮೈಸೂರು ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿ ನಡಾವಳಿ ಹಾಗೂ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಎಲ್ಲಾ ದೂರವಾಣಿ ಸಂಸ್ಥೆಗಳು ಪಾಲಿಕೆಗೆ ಶುಲ್ಕ ಪಾವತಿಸಿ ತಮ್ಮ ಮೊಬೈಲ್ ಟವರ್ ಗಳನ್ನು ಅಳವಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಮೈಸೂರು ನಗರದಾದ್ಯಂತ ಸುಮಾರು 400ಮೊಬೈಲ್ ಟವರ್ ಗಳನ್ನು ಅಳವಡಿಸಿದ್ದು ಅವುಗಳ್ಯಾವುದಕ್ಕೂ ಶುಲ್ಕ ಪಾವತಿಸಿಲ್ಲ. ಸರ್ಕಾರದ ಆದೇಸದ ಪ್ರಕಾರ 1ಟವರ್ ಗೆ 50ಸಾವಿರ ರೂ ಕನಿಷ್ಠ ಶುಲ್ಕವನ್ನು (ಒನ್ ಟೈಮ್ ಪೇಮೆಂಟ್ ) ಪಾವತಿಸಬೇಕಾಗಿದೆ. ಅದರಂತೆ ಪಾಲಿಕೆಗೆ ಸುಮಾರು 2ಕೋಟಿ ರೂ.ವರಮಾನ ಬರಬೇಕಾಗಿದೆ. ಮೂರು ತಿಂಗಳೊಳಗೆ ಶುಲ್ಕ ಪಾವತಿಸಿ ನೊಂದಣಿ ಮಾಡಿಕೊಂಡವರು ಮಾತ್ರ ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ತಪ್ಪಿದಲ್ಲಿ ನಿಯಮಾನುಸಾರ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: