ಮೈಸೂರು

ಜ್ಞಾನ ವಾರಿಧಿ-2 ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮ

ಮೈಸೂರು,ಡಿ.12:- ಜೆಎಸ್ಎಸ್ ಮಹಾವಿದ್ಯಾಪೀಠ ಮತ್ತು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ಆನ್ ಲೈನ್ (ವರ್ಚುವಲ್) ಮೂಲಕ ವಿಶೇಷ ಉಪನ್ಯಾಸ ಮಾಲೆಯ ಕಾರ್ಯಕ್ರಮಗಳನ್ನು 2020ರ ಡಿಸೆಂಬರ್ ತಿಂಗಳಿನಿಂದ ಪ್ರತಿ ಸೋಮವಾರ ಹಮ್ಮಿಕೊಳ್ಳಲಾಗಿದೆ.
ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಧರ್ಮ, ಅಧ್ಯಾತ್ಮ ಮುಂತಾದ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತು ದೇಶ ಮತ್ತು ವಿದೇಶದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗಿದೆ.
ಜ್ಞಾನ ವಾರಿಧಿ-2 ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮವು 14.12.2020ರ ಸೋಮವಾರ ಸಂಜೆ 6 ಗಂಟೆಗೆ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಜರುಗಲಿದೆ. ಬೆಂಗಳೂರಿನ ಹೃದ್ರೋಗ ತಜ್ಞರಾದ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿಯವರು ಆರೋಗ್ಯ-ಸಂಸ್ಕೃತಿ ವಿಷಯ ಕುರಿತು ಆನ್ ಲೈನ್ ನಲ್ಲಿ ಉಪನ್ಯಾಸ ನೀಡಲಿದ್ದಾರೆ.
Yotube http://Youtube.com/c/JSSMahavidyapeethaonline
https:// www.facebook.com/JSSMVP
http://jssonline.org ಲಿಂಕ್ಗಳ ಮೂಲಕ ಈ ಉಪನ್ಯಾಸವನ್ನು ಕೇಳಬಹುದಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: