ಮೈಸೂರು

ಅಪಾರ್ಟ್ಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯೂರಿಟಿ ಅನುಮಾನಾಸ್ಪದ ಸಾವು

ಮೈಸೂರು,ಡಿ.12:- ಅಪಾರ್ಟ್ಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯೂರಿಟಿ ಓರ್ವರು ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಬೋಗಾದಿ ಬಳಿಯ ಗದ್ದಿಗೆ ರಸ್ತೆಯಲ್ಲಿರುವ ಟ್ರೆಂಡ್ಜ್ ವಿಸ್ಪರಿಂಗ್ ವುಡ್ಸ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ಮೃತರನ್ನು ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಮಾದಗಳ್ಳಿ ಗ್ರಾಮದ ನಿವಾಸಿ ಮರಿ ದೇವ ನಾಯಕ (60)ಎಂದು ಹೇಳಲಾಗಿದೆ. ಇವರು ನಿನ್ನೆ ಬೆಳಿಗ್ಗೆ 8ಗಂಟೆಗೆ ಕೆಲಸಕ್ಕೆ ಹಾಜರಾಗಿದ್ದರು. ಓವರ್ ಡ್ಯೂಟಿ ಮಾಡಿದ್ದರಿಂದ ತೀವ್ರ ಆಯಾಸಗೊಂಡು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸೆಕ್ಯೂರಿಟಿ ಏಜೆನ್ಸಿ ಯವರೇ ಒತ್ತಡ ಹೇರಿ ಓವರ್ ಡ್ಯೂಟಿ ಮಾಡಿಸಿದ್ದಾರೆಂದು ಆರೋಪ ಕೇಳಿ ಬಂದಿದೆ. ಮರಿದೇವನಾಯಕ 12ಗಂಟೆ ಕೆಲಸ ಮುಗಿಸಿ ಮನೆಗೆ ತೆರಳ ಬೇಕಿತ್ತು. ಸೆಕ್ಯೂರಿಟಿ ಏಜೆನ್ಸಿ ಒತ್ತಡ ಹೇರಿದ್ದರಿಂದ ಮತ್ತೆ ಕೆಲಸ ಮುಂದುವರೆಸಿದ್ದರು ಎನ್ನಲಾಗಿದೆ. ಘಟನೆ ನಡೆದು ಹಲವು ಗಂಟೆಗಳಾದರೂ ಸೆಕ್ಯೂರಿಟಿ ಏಜೆನ್ಸಿಯವರು ಸ್ಥಳಕ್ಕೆ ಬಂದಿರಲಿಲ್ಲ. ಪೊಲೀಸರು ಬಂದು ಪರಿಶೀಲನೆ ನಡೆಸಿದರೂ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎನ್ನಲಾಗುತ್ತಿದೆ. ಪೊಲೀಸರ ನಡೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: