ಕರ್ನಾಟಕಪ್ರಮುಖ ಸುದ್ದಿ

ಇಂದಿನಿಂದ ಮೂರು ದಿನ ಮಲೆಮಹದೇಶ್ವರನ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ

ರಾಜ್ಯ(ಚಾಮರಾಜನಗರ)ಡಿ.12:- ಮಹಾಮಾರಿ ಕೊರೋನಾದಿಂದ ಎಲ್ಲೆಡೆ ಅದ್ಧೂರಿಯಾಗಿ ನಡೆಯುತ್ತಿದ್ದ ದೇವರ ವಿಶೇಷ ಪೂಜಾ ಕಂಕೈರ್ಯಗಳಲ್ಲಿ ಭಾಗಿಯಾಗಲು ಭಕ್ತರಿಗೆ ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ ದೇವರ ದರ್ಶನ ಪಡೆಯಲು ಕೂಡ ಸಾಧ್ಯವಾಗುತ್ತಿಲ್ಲ.
ಚಾಮರಾಜನಗರ ಜಿಲ್ಲೆಯಲ್ಲಿರುವ ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ಅಮಾವಾಸ್ಯೆಯಂತೆ ಈ ಬಾರಿಯ ಅಮಾವಾಸ್ಯೆಯಲ್ಲಿ ಕೂಡ ಮಹದೇಶ್ವರನಿಗೆ ಸಾಂಪ್ರದಾಯಿಕವಾಗಿ ಎಣ್ಣೆ ಮಜ್ಜನ ಅಭಿಷೇಕ ನಡೆಯುತ್ತದೆ. ಆದರೆ ಜನರಿಲ್ಲದ ಕಾರಣ ಅದ್ಧೂರಿತನ ಇರುವುದಿಲ್ಲ. ಆದರೆ ಎಣ್ಣೆ ಮಜ್ಜನ ಸಾಂಪ್ರದಾಯಿಕವಾಗಿ ನೆರವೇರಲಿದೆ.
ಡೆಡ್ಲಿ ಕೊರೊನಾ ಭೀತಿಯಿಂದ ಭಕ್ತರಿಗೆ ಇದನ್ನು ನೋಡುವ ಸೌಭಾಗ್ಯವಿಲ್ಲ. ಈ ಕಾರಣದಿಂದಲೇ ಶನಿವಾರದಿಂದ ಮೂರು ದಿನಗಳ ಕಾಲ ಮಹದೇಶ್ವರ ಬೆಟ್ಟಕ್ಕೆ ಭಕ್ತರಿಗೆ ಅವಕಾಶವಿಲ್ಲ.
ಮಹದೇಶ್ವರನ ಬೆಟ್ಟಕ್ಕೆ ಕರ್ತವ್ಯಕ್ಕೆ ಹೊರ ಊರಿನಿಂದ ಬರುವರು ಹೊರತುಪಡಿಸಿ ಯಾರಿಗೂ ಪ್ರವೇಶವಿಲ್ಲ. ಸಾರಿಗೆ ನೌಕರರ ಮುಷ್ಕರ ಇರುವ ಕಾರಣ ಬೆಟ್ಟಕ್ಕೆ ಬರುವವರಿಗೆ ಕಡಿವಾಣ ಬಿದ್ದಂತಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: