
ಮೈಸೂರು
8ಮಂದಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಮೈಸೂರು,ಡಿ,12 :-ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ 3ನೇ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದಲ್ಲಿ ವಿವಿಧ ಕ್ಷೇತ್ರದ 8 ಮಂದಿ ಸಾಧಕರಿಗೆ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.
ಶನಿವಾರ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ.ಸಿ.ಪಿ.ಕೃಷ್ಣಕುಮಾರ್(ಸಾಹಿತ್ಯ), ಏರ್ ಮಾರ್ಶಲ್, ಕೆ.ರಾಮಸುಂದರ(ಎಂಜಿನಿಯರ್), ಡಾ.ಟಿ.ಎಂ.ರಮಣರಾವ್(ವೈದ್ಯಕೀಯ),ಡಾ.ಎಂ.ಕೆ.ಸೂರಪ್ಪ(ವಿಜ್ಞಾನ), ಎ.ಸಿ.ಪುಷ್ಪ(ಕ್ರೀಡೆ), ಶಿವಮೂರ್ತಿ ಕೀಲಾರ(ಅನಿವಾಸಿ ಭಾರತೀಯ-ಸಮಾಜ ಸೇವೆ), ಡಾ.ಎಂ.ಧರ್ಮಪ್ರಸಾದ್(ಅನಿವಾಸಿ ಭಾರತೀಯ-ಕೈಗಾರಿಕೋದ್ಯಮ) ಇವರಿಗೆ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾಶ್ಮೀರ್ ವಿವಿ ವಿಶ್ರಾಂತ ಕುಲಪತಿ ಪದ್ಮಶ್ರೀ ಜೆ.ಎ.ಕೆ.ತರೀನ್, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮೈ.ವಿ.ವಿ.ಹಿ.ವಿ ಸಂಘದ ಅಧ್ಯಕ್ಷ ಡಾ.ವಸಂತಕುಮಾರ್ ತಿಮಕಾಪುರ ಇತರರು ಇದ್ದರು. (ಕೆ.ಎಸ್,ಎಸ್.ಎಚ್)