
ಕ್ರೀಡೆದೇಶಪ್ರಮುಖ ಸುದ್ದಿವಿದೇಶ
NZ Vs PAK: ಟಿ 20 ಸರಣಿಯಿಂದ ಬಾಬರ್ ಅಜಮ್ ಹೊರಕ್ಕೆ
ದೇಶ(ನವದೆಹಲಿ)ಡಿ.14:- ಡಿಸೆಂಬರ್ 18 ರಿಂದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-ಟ್ವೆಂಟಿ ಸರಣಿಗೂ ಮೊದಲು ಪಾಕಿಸ್ತಾನ ತಂಡವು ದೊಡ್ಡ ಹಿನ್ನಡೆ ಅನುಭವಿಸಿದೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಇಪ್ಪತ್ತು-ಇಪ್ಪತ್ತು ಸರಣಿಯ ಭಾಗವಾಗುವುದಿಲ್ಲ. ನಾಯಕ ಬಾಬರ್ ಅಜಮ್ ಟಿ 20 ಸರಣಿಯಿಂದ ನಿರ್ಗಮಿಸಿದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.
ವರದಿಗಳ ಪ್ರಕಾರ ಬಾಬರ್ ಅಜಮ್ ಅವರ ಬೆರಳಿನ ಗಾಯದ ಸಮಸ್ಯೆಯಿಂದಾಗಿ ಮೂರು ಪಂದ್ಯಗಳ ಟ್ವೆಂಟಿ-ಟ್ವೆಂಟಿ ಸರಣಿಯಿಂದ ಹೊರಗುಳಿದಿದ್ದಾರೆ. ಅಭ್ಯಾಸದ ಸಮಯದಲ್ಲಿ ಬಾಬರ್ ಅಜಮ್ ಅವರ ಬೆರಳಿಗೆ ಗಾಯವಾಗಿದ್ದು, ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಬರ್ ಅಜಮ್ ಆಡಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಗೆ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಾವುದೇ ಹೇಳಿಕೆ ನೀಡಿಲ್ಲ ಎನ್ನಲಾಗುತ್ತಿದೆ.
ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಬೆರಳಿಗೆ ಕೂಡ ಪೆಟ್ಟಾಗಿದೆ. ಈ ಗಾಯದಿಂದಾಗಿ ಇಮಾಮ್ ಉಲ್ ಹಕ್ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಮಾಮ್-ಉಲ್-ಹಕ್ ಆಡುವ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಈ ಇಬ್ಬರು ಆಟಗಾರರನ್ನು ಬದಲಿಸುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡ ಘೋಷಿಸಿಲ್ಲ. ಆದರೆ ಬಾಬರ್ ಅಜಮ್ ನಿರ್ಗಮಿಸಿದ ನಂತರ, ಶಾದಾಬ್ ಖಾನ್ ಟಿ 20 ಸರಣಿಯಲ್ಲಿ ಪಾಕಿಸ್ತಾನ ತಂಡದ ಅಧಿಪತ್ಯ ವಹಿಸಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಗೆ ಶಾದಾಬ್ ಖಾನ್ ಉಪನಾಯಕನಾಗಿ ಆಯ್ಕೆಯಾದರು. (ಏಜೆನ್ಸೀಸ್,ಎಸ್.ಎಚ್)