ಕರ್ನಾಟಕಪ್ರಮುಖ ಸುದ್ದಿ

ವಿದ್ಯಾ ವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ

ರಾಜ್ಯ( ಉಡುಪಿ)ಡಿ.13:- ನಾಡಿನ ಪ್ರಮುಖ ಹಿರಿಯ ವಿದ್ವಾಂಸ, ವಾಗ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಇಂದು ನಿಧನರಾಗಿದ್ದಾರೆ.
ಅವರಿಗೆ 84ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ತೀವ್ರ ಅನಾರೋಗ್ಯ ಕಾಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿರುವ ತಮ್ಮ ಸ್ವಗೃಹದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅವರು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಪುತ್ರ ಇತ್ತೀಚೆಗೆ ಗಷ್ಟೇ ನಿಧನರಾಗಿದ್ದಾರೆ.
ವಿದ್ವಾಂಸ ಡಾ.ಬನ್ನಂಜೆಯವರು ವೇದ ಭಾಷ್ಯ, ಉಪನಿಷತ್ ಭಾಷ್ಯ, ಮಹಾಭಾರತ, ಪುರಾಣ ಮತ್ತು ರಾಮಾಯಣಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು. ವೇದ ಸೂಕ್ತ, ಉಪನಿಷತ್, ಶಟ ರುದ್ರಿಯಾ, ಬ್ರಹ್ಮ ಸೂತ್ರ ಭಾಷ್ಯ, ಗೀತ ಭಾಷ್ಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಸಂಸ್ಕೃತ ವ್ಯಾಖ್ಯಾಯನ ಎಂಬ ಸುಮಾರು 4 ಸಾವಿರ ಪುಟಗಳ ಸಮಗ್ರ ಕೃತಿ, ಸುಮಾರು 150 ಪುಸ್ತಕಗಳನ್ನು ಬರೆದಿದ್ದಾರೆ.

ಹಲವು ಐತಿಹಾಸಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದೂ ಪಠ್ಯ ಉಪನಿಷತ್ ನ ಅಧ್ಯಾಯಗಳ ಮೇಲೆ ವ್ಯಾಖ್ಯಾನ ಬರೆದಿದ್ದಾರೆ.


ಇವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

comments

Related Articles

error: