ಮನರಂಜನೆ

ನಟಿ ಟಬು ಮದುವೆಯಾಗದಿರಲು ಸೂಪರ್ ಸ್ಟಾರ್ ಕಾರಣವಂತೆ !

ಪಂಚಭಾಷಾ ನಟಿ ಟಬು ಇಂದಿಗೂ ಸಿಂಗಲ್, ಇದಕ್ಕೆ ಕಾರಣ ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಒಬ್ಬರೆನ್ನುವುದು ಗಾಸಿಪ್.

ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳಂ, ಮರಾಠಿ ಚಿತ್ರಗಳಲ್ಲಿ ಮಿಂಚಿದ 45 ವರ್ಷದ ಚೆಂದುಳ್ಳಿ ಚೆಲುವೆ ಟಬು ಇಂದಿಗೂ ಮದುವೆಯಿಲ್ಲದೆ ಏಕಾಂಗಿಯಾಗಿ ಜೀವನ ನಡೆಸುತ್ತಿರುವುದಕ್ಕೆ ಕಾರಣ ಆಕೆಯ ಪ್ರೀತಿ.

ತೆಲುಗಿನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಪ್ರೇಮಾಂಕುರವಾಗಿದ್ದು ಅವರನ್ನು ಕಳೆದ 15 ವರ್ಷಗಳಿಂದಲೂ ಪ್ರೀತಿಸುತ್ತಿದ್ದಾಳೆ. ಇವರೀರ್ವರ ಪ್ರೇಮ ಟಾಲಿವುಡ್‍ನಲ್ಲಿ ತಿಳಿದಿರುವ ವಿಷಯವೇ.

ಅಕ್ಕಿನೇನಿ ನಾಗಾರ್ಜುನ್ ಈಗಾಗಲೇ ಎರಡು ಮದುವೆಯಾಗಿದ್ದು ಟಬು ಅವರನ್ನು ಮದುವೆಯಾಗಲು ಕಾನೂನಿನಲ್ಲಿ ತೊಡಕುಂಟಾಗುವುದು. ಇದನ್ನರಿತಿರುವ ಈಕೆ ನಾಗಾರ್ಜುನ್ ಪ್ರೇಮದಿಂದ ವಿಮುಖಳಾಗದೆ ಮದುವೆಯ ಸೊಲ್ಲೆತ್ತದೆ, ಮುಂಬೈ ತೊರೆದು ಹೈದ್ರಾಬಾದ್‍ನಲ್ಲೇ ವಾಸಿಸುತ್ತಿದ್ದಾರೆ.

ನಟ ಅಕ್ಕಿನೇನಿ ನಾಗಾರ್ಜುನ್‍, ಅಮಲಾ ಜೊತೆಗಿನ ತನ್ನ ಎರಡನೇ ಮದುವೆ ಮುರಿಯಲು ಇಷ್ಟವಿಲ್ಲದ ಕಾರಣ ಟಬುವಿನೊಂದಿಗೆ ಲಿವಿಂಗ್ ರಿಲೇಷನ್‍ಶಿಪ್‍ ಹೊಂದಿದ್ದಾರೆ. ನಾಗಾರ್ಜುನ್ ಅವರು ತಮ್ಮ ಮನೆ ಸಮೀಪದಲ್ಲಿಯೇ ಟಬುಗೆ ಮನೆ ಮಾಡಿ ಕೊಟ್ಟು ಆಕೆಯ ಕಷ್ಟ ಸುಖವನ್ನು ನೋಡುತ್ತಿದ್ದಾರೆ ಎನ್ನುತ್ತಾರೆ ಗಾಸಿಪ್‍ ಮಂದಿ.

ನಾಗಾರ್ಜುನ್ ಅವರನ್ನು ಅತಿಯಾಗಿ ಪ್ರೀತಿಸಿದ್ದ ಟಬು ಇನ್ನೊಬ್ಬರನ್ನು ಮದುವೆಯಾಗಲು ಮನಸ್ಸು ಮಾಡಿಲ್ಲ. ಕಳೆದೊಂದು ದಶಕದಿಂದ ಚಿತ್ರರಂಗದಿಂದ ದೂರವಿದ್ದ ಟಬು, ಈಗ ನಾಗಾರ್ಜುನ್ ಎರಡನೇ ಪುತ್ರ ಅಖಿಲ್ ಅಕ್ಕಿನೇನಿ ಅವರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

(ಕೆಎಂಆರ್/ಎನ್‍ಬಿಎನ್‍)

Leave a Reply

comments

Related Articles

error: