ಮೈಸೂರು

ಜನರ ಆದೇಶಕ್ಕೆನಾವು ಬದ್ಧ : ವಿ.ಶ್ರೀನಿವಾಸ್ ಪ್ರಸಾದ್

ಇದೊಂದು ರೀತಿಯ ಅನಿರೀಕ್ಷಿತ ಫಲಿತಾಂಶ. ಜನರ ಆದೇಶಕ್ಕೆ ನಾವು ಬದ್ದ ಎಂದು ನಂಜನಗೂಡಿನಲ್ಲಿ  ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ವಿ .ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕದ ಇತಿಹಾಸದಲ್ಲಿ ಈ ಚುನಾವಣೆಯೊಂದು  ಕುರುಹಾಗಿದೆ. ನಾನು ನನ್ನ ಸ್ವಾಭಿಮಾನಕ್ಕೆ ನಾನು ಬದ್ದ. ರಾಜಕೀಯ ಕೊನೆ ದಿನಗಳಲ್ಲಿ ನೋವಾಗಿದೆ. ಸ್ವಾಭಿಮಾನ ಕ್ಕೆ ಸೋಲಾಗಿದೆ ದುರಭಿಮಾನಕ್ಕೆ ಗೆಲುವಾಗಿದೆ. ಮತದಾನದ ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ.ಅಧಿಕಾರ ದುರುಪಯೋಗ ದಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದಾರೆ.

 ಇನ್ನು ಮುಂದೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಸಕ್ರಿಯ ರಾಜಕರಣದಲ್ಲಿ ಇರುತ್ತೇನೆ ಎಂದರು.   ಈ ಸಂದರ್ಭ ಮಾಜಿ ಸಚಿವ ಎಸ್.ಎ. ರಾಮದಾಸ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.(ಕೆ.ಎಸ್-ಎಸ್.ಎಚ್)

Leave a Reply

comments

Related Articles

error: