ಮನರಂಜನೆ

ಕಾಮಿಡಿ ಶೋನಿಂದ ಹೊರ ಬಂದ ಸುನಿಲ್ ಗ್ರೋವರ್‍ ಅವರಿಂದ ಹೊಸ ಹಾಸ್ಯ ತಂಡ

ಅತ್ಯಂತ ಜನಪ್ರಿಯ ಕಾಮಿಡಿ ಶೋ ‘ಕಾಮಿಡಿ ವಿತ್ ಕಪಿಲ್ ಶರ್ಮಾ’ ಶೋ ನಿಂದ ಹೊರ ಬಂದಿರುವ ಸುನಿಲ್ ಗ್ರೋವರ್ ಅವರು ತಮ್ಮದೇ ಹೊಸ ಹಾಸ್ಯ ತಂಡ ರಚಿಸಿದ್ದಾರೆ.

ಸುನಿಲ್ ಗ್ರೋವರ್ ಅವರು ಕಳೆದ ಹಲವಾರು ವರ್ಷಗಳಿಂದ ಕಪಿಲ್ ಶರ್ಮಾ ಅವರೊಂದಿಗೆ ಶೋ ನೀಡುತ್ತಿದ್ದು ಅತ್ಯಂತ ಯಶಸ್ವೀ ಹಾಗೂ ಜನಪ್ರಿಯತೆ ಗಳಿಸಿದ್ದ ಕಾಮಿಡಿ ವಿತ್ ಕಪಿಲ್ ಶರ್ಮಾ ಶೋನ ಪ್ರಮುಖ ಪಾತ್ರಧಾರಿಗಳ್ಳೊಬ್ಬರಾಗಿ ನಾನಾ ಅವತಾರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಹಾಸ್ಯವನ್ನು ಉಣಬಡಿಸುತ್ತಿದ್ದರು.

ಕಪಿಲ್ ಹಾಗೂ ಸುನಿಲ್ ನಡುವಿನ ಕೋಳಿ ಜಗಳವೇ ಶೋದಿಂದ ಹೊರಬರಲು ಕಾರಣ ಎಂದು ತಿಳಿದು ಬಂದಿದ್ದು, ಸಂಧಾನದ ಯತ್ನಗಳು ವಿಫಲವಾಗಿವೆ. ಶೋನಿಂದ ಹೊರಬಂದಿರುವ ಸುನಿಲ್ ಗ್ರೋವರ್, ತಮ್ಮದೇ ತಂಡ ರಚಿಸಿಕೊಂಡು ಮತ್ತೊಂದು ಕಾಮಿಡಿ ಶೋ ನಡೆಸುವ ಇರಾದೆ ಹೊಂದಿದ್ದು, ತಂಡದಲ್ಲಿ ಬೇಬಿ ಡಾಲ್, ಸನ್ನಿ ಲಿಯೋನ್ ಇರಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಹಲವಾರು ವಾಹಿನಿಗಳಿಂದ ಸುನಿಲ್‍ಗೆ ಭಾರಿ ಬೇಡಿಕೆ ಬಂದಿದ್ದು ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.

(ಕೆ.ಎಂ.ಆರ್/ಎನ್‍.ಬಿ.ಎನ್‍)

Leave a Reply

comments

Related Articles

error: