ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಹೊಸದಾಗಿ 830 ಕೊರೋನಾ ಪ್ರಕರಣ ಪತ್ತೆ

ರಾಜ್ಯ( ಬೆಂಗಳೂರು)ಡಿ.15:- ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಅತಿ ಕಡಿಮೆ ಎನ್ನುವಂತೆ 830 ಕೊರೋನಾ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. 2164 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ 874202 ಆಗಿದೆ. ಸದ್ಯ 16065 ಸಕ್ರಿಯ ಪ್ರಕರಣಗಳಿವೆ.

10 ಮಂದಿ ಸಾವನ್ನಪ್ಪಿದ್ದು, ಒಟ್ಟಾರೇ ಮೃತರ ಸಂಖ್ಯೆ 11954 ಆಗಿದೆ. ಒಟ್ಟಾರೇ ಸೋಂಕಿತರ ಸಂಖ್ಯೆ 902240 ಆಗಿದ್ದು, ಪಾಸಿಟಿವ್ ದರ ಶೇ.1.27, ಮರಣ ಪ್ರಮಾಣ ದರ ಶೇ.1. 20 ರಷ್ಟಿದೆ.

ಬಾಗಲಕೋಟೆಯಲ್ಲಿ 4, ಬಳ್ಳಾರಿ 17, ಬೆಳಗಾವಿ 11, ಬೆಂಗಳೂರು ಗ್ರಾಂ 7, ಬೆಂಗಳೂರು ನಗರ 369, ಬೀದರ್ 4, ಚಾಮರಾಜನಗರ 7, ಚಿಕ್ಕಬಳ್ಳಾಪುರ 31, ಚಿಕ್ಕಮಗಳೂರು 15, ಚಿತ್ರದುರ್ಗ 5, ದಕ್ಷಿಣ ಕನ್ನಡ 22, ದಾವಣಗೆರೆ 18, ಧಾರವಾಡ 14, ಗದಗ 2, ಹಾಸನ 29, ಹಾವೇರಿ 3, ಕಲಬುರಗಿ 12, ಕೊಡಗು 34, ಕೋಲಾರ 25, ಕೊಪ್ಪಳ 5, ಮಂಡ್ಯ 5, ಮೈಸೂರು 56, ರಾಯಚೂರು 6, ರಾಮನಗರ 2, ಶಿವಮೊಗ್ಗ 13, ತುಮಕೂರು 36, ಉಡುಪಿ 12, ಉತ್ತರ ಕನ್ನಡ 18, ವಿಜಯಪುರ 15, ಯಾದಗಿರಿ 17 ಪ್ರಕರಣಗಳು ಕಂಡುಬಂದಿವೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: