ಪ್ರಮುಖ ಸುದ್ದಿಮನರಂಜನೆ

ತೆರೆ ಮೇಲೆ ಬರಲಿದೆಯಂತೆ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಬಯೋಪಿಕ್


ದೇಶ( ನವದೆಹಲಿ)ಡಿ.15:- ಬಾಲಿವುಡ್ ನಲ್ಲಿ ಚೆಸ್ ಗ್ರ್ಯಾಂಡ್ ಮಾಸ್ಟರ್ ಭಾರತದ ವಿಶ್ವನಾಥನ್ ಆನಂದ್ ಅವರ ಜೀವನವನ್ನು ತೆರೆಮೇಲೆ ತರುವ ಸಿದ್ದತೆ ನಡೆಸಲಾಗಿದೆ.

ವಿಶ್ವನಾಥನ್ ಆನಂದ್ ಚೆಸ್ ನಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ಗೆದ್ದಿದ್ದು, ಅವರ ಬದುಕಿನ ಕಥೆಯನ್ನು ದೊಡ್ಡ ಪರದೆಯಲ್ಲಿ ಪ್ರೇಕ್ಷಕರ ಮುಂದೆ ತರುವ ಬಯೋಪಿಕ್ ಅನೌನ್ಸ್ ಆಗಿದ್ದು, ಈ ಸುದ್ದಿಯನ್ನು ಬಾಲಿವುಡ್ ಸಿನಿಮಾ ವಿತರಕ ತರಣ್ ಆದರ್ಶ್ ಟ್ವೀಟರ್ ನಲ್ಲಿ ಖಚಿತಪಡಿಸಿದ್ದಾರೆ.
ಚೆಸ್ ಗ್ರ್ಯಾಂಡ್ ಮಾಸ್ಟರ್ ಆನಂದ್ ಜೀವನಾಧಾರಿತ ಚಿತ್ರವನ್ನು ಮಾಡಲು ಬಾಲಿವುಡ್ ಸಜ್ಜಾಗಿದ್ದು, ಈ ಚಿತ್ರವನ್ನು ಆನಂದ್ ಎಲ್ ರೈ ನಿರ್ದೇಶಿಸಲಿದ್ದಾರೆ ಎಂದು ಟ್ವೀಟರ್ ನಲ್ಲಿ ತಿಳಿಸಿದ್ದಾರೆ. ಚಿತ್ರದ ಟೈಟಲ್ ಹಾಗೂ ಕಲಾವಿದರ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಸಿನಿ ಪ್ರೇಕ್ಷಕರಲ್ಲಿ ಚಿತ್ರದ ನಾಯಕ ಯಾರು ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿದ್ದು, ಚರ್ಚೆಯಲ್ಲಿ ಅಭಿಷೇಕ್ ಬಚ್ಬನ್ ಹೆಸರು ಮುನ್ನಡೆಯಲ್ಲಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆನಂದ್ ಎಲ್ ರೈ ಅವರು ಅತ್ರಂಗಿ ರೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಚೆಸ್ ಮಾಂತ್ರಿಕ ವಿಶ್ಬನಾಥನ್ ಆನಂದ್ ಬಯೋಪಿಕ್ ಕೈಗೆತ್ತಿಕೊಳ್ಳುವ ಸಾದ್ಯತೆಯಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: