ಮೈಸೂರು

ಈಗಿನ ರಾಜಕಾರಣಿಗಳಿಗೆ ಓದುವ ಹವ್ಯಾಸವಿಲ್ಲ, ಹೊಸ ಸಮಾಜ ಹೇಗೆ ಕಟ್ಟಲು ಸಾಧ್ಯ : ಪ್ರೊ.ಕೆ.ಎಸ್.ಭಗವಾನ್ ಪ್ರಶ್ನೆ

ಮೈಸೂರು,ಡಿ.15:- ಈಗಿನ ರಾಜಕಾರಣಿಗಳಿಗೆ ಓದುವ ಹವ್ಯಾಸವೇ ಇಲ್ಲದಿರುವುದರಿಂದ ಹೊಸ ಸಮಾಜ ಕಟ್ಟಲು ಹೇಗೆ ಸಾಧ್ಯವಾಗಲಿದೆ ಎಂದು ವಿಚಾರವಾದಿ ಪ್ರೊ. ಕೆ.ಎಸ್.ಭಗವಾನ್ ಪ್ರಶ್ನಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿಂದು ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ, ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಸಾಮಾಜಿಕ ಚಿಂತನೆಗಳು- ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ʻಶೂದ್ರರು, ಬ್ರಾಹ್ಮಣರು ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅರಸು ಅವರ ಚಿಂತನೆಗಳು ಇದ್ದವು ಎಂದು ಹೇಳಿದರು.
ಈಚೆಗೆ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಭಾರತದ ವರ್ಣ ವ್ಯವಸ್ಥೆ ಕುರಿತು ಮಾತನಾಡಿ ವಿವಾದಕ್ಕೆ ಕಾರಣವಾಗಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎಸ್.ಭಗವಾನ್ ರಾಜಕಾರಣಿಗಳು ಓದುವ ಹವ್ಯಾಸ ಮುಖ್ಯ ಎಂಬುದನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಡ್ಡಿಕೆರೆ ಗೋಪಾಲ್, ಚಂದ್ರಶೇಖರ ಇತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: