ಮೈಸೂರು

ದೆಹಲಿ ರೈತರ ಹೋರಾಟ ಬೆಂಬಲಿಸಿ ನಾಳೆಯಿಂದ ಬೆಂಗಳೂರಿನಲ್ಲಿ ರೈತರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ

ಮೈಸೂರು,ಡಿ.15:- ದೆಹಲಿಯಲ್ಲಿ ದಿನಗಳಿಂದ ಕೊರೆಯುವ ಚಳಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ಹದಿನಾಲ್ಕು ಜನ ರೈತರು ಹೋರಾಟಕ್ಕಾಗಿ ಪ್ರಾಣ ತೆತ್ತಿದ್ದರೂ ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸದೆ, ವಿಳಂಬ ಮಾಡುವ ಮೂಲಕ ಚಳುವಳಿ ದಿಕ್ಕುತಪ್ಪಿಸಲು ಯತ್ನಿಸುತ್ತಿರುವುದು ಸರಿಯಲ್ಲ, ಈ ಚಳುವಳಿಯನ್ನು ಬೆಂಬಲಿಸಲು ಕರ್ನಾಟಕದ ರೈತರ ಪರವಾಗಿ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ನಾಳೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೈಸೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತಕ್ಕಾಗಿ ಕಾಯ್ದೆ ಜಾರಿಗೆ ತರಲಾಗಿದೆ ಎನ್ನುತ್ತಾರೆ, ಆದರೆ ರೈತರ ಹೋರಾಟ ತೀವ್ರವಾಗುತ್ತಿದ್ದಂತೆ ತಿದ್ದುಪಡಿ ಮಾಡಲು ಮುಂದಾಗುತ್ತಾರೆ ಇದರಿಂದಲೇ ತಿಳಿಯಬೇಕು ಕಾಯ್ದೆಯಲ್ಲಿ ಲೋಪ ದೋಷವಿದೆ ಎಂಬುದನ್ನು, ಕಲ್ಲಿದ್ದಲು ವಿಮಾನಯಾನ ರೈಲ್ವೆ ಟೆಲಿಕಾಂ ಗಳನ್ನು ಖಾಸಗಿ ವ್ಯವಸ್ಥೆಗೆ ಮಾರಲಾಗಿದೆ. ಈಗ ದೇಶದ ರೈತರನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ, ಅದಕ್ಕಾಗಿಯೇ ದೇಶದ ರೈತರು ಜಾಗೃತರಾಗಿ ಬೀದಿಗಿಳಿದಿದ್ದಾರೆ, ವಿರೋಧಪಕ್ಷಗಳು ರೈತ ಹೋರಾಟವನ್ನು ಬೆಂಬಲಿಸಿದರೆ ಆಡಳಿತ ಪಕ್ಷಕ್ಕೆ ಆಗುವ ನಷ್ಟವೇನು ಎಂದು ಪ್ರಶ್ನಿಸಿದರು ರಾಜ್ಯದ ರೈತ ದಲಿತ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಲಾಯಿತು,ಈ ಹೋರಾಟದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ , ಸರ್ಕಾರಗಳ ವೈಫಲ್ಯದಿಂದ ನಾವು ಚಳುವಳಿ ದಾರಿ ಹಿಡಿಯಬೇಕಾಗಿದೆ ಎಂದರು
ಇಂದಿನ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರ್ ಶಂಕರ, ರಾಜಣ್ಣ, ಅಂಕಪ್ಪ, ಪರಶಿವಮೂರ್ತಿ ಮಹಿಳಾ ಸಂಚಾಲಕಿ ರಾಣಿ, ಬರಡನಪುರ ನಾಗರಾಜ್, ಆಡ್ಯರವಿ, ಪ್ರಸಾದ್ ನಾಯಕ್ ಮಂಜುನಾಥ್, ಕೆ ಜಿ ಎಸ್ ಗುರುಸ್ವಾಮಿ, ರಾಮೇಗೌಡ, ಕೃಷ್ಣೆಗೌಡ , ರಾಜು ಹೆಗ್ಗೂರ್ ರಂಗರಾಜ್, ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: