ಮೈಸೂರು

ಯುವಕನ ಕೊಲೆ : ಸ್ನೇಹಿತರಿಂದಲೇ ಕೊಲೆ ಶಂಕೆ

ಮೈಸೂರು,ಡಿ.15:- ಯುವಕನೋರ್ವನನ್ನು ಸ್ನೇಹಿತರೇ ಕೊಲೆಗೈದ ಘಟನೆ ಮೈಸೂರಿನ ಕುರಿಮಂಡಿ ಎ ಬ್ಲಾಕ್ ನಲಿ ನಡೆದಿದೆ.
ಕೊಲೆಯಾದ ಯುವಕನನ್ನು ರವಿ ಅಲಿಯಾಸ್ ಬಚ್ಚಾ ರವಿ (26) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ ಸ್ನೇಹಿತರು ಜೊತೆಯಲ್ಲೇ ಕುಡಿದು ಕೊಲೆ ಮಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ರವಿ ಮೈಸೂರಿನಲ್ಲಿ ರೋಡ್ ರೋಲರ್ ಚಾಲಕ ನಾಗಿದ್ದ. ಕಳೆದ ಕೆಲದಿನಗಳಿಂದ ಮೈಸೂರಿನಲ್ಲಿ ನೆಲೆಸಿದ್ದ. ಕತ್ತು ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎನ್ ಆರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು‌ ಹಂತಕರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: