ದೇಶಪ್ರಮುಖ ಸುದ್ದಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕುರಿತ ಪುಸ್ತಕ :ಪ್ರಕಾಶಕರಿಗೆ ತಕ್ಷಣ ನಿಲ್ಲಿಸುವಂತೆ ಪತ್ರ ಬರೆದ ಪ್ರಣಬ್ ಪುತ್ರ


ದೇಶ(ನವದೆಹಲಿ)ಟಿ.16:- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಮತ್ತು ಲೋಕಸಭೆಯ ಮಾಜಿ ಸಂಸದ ಅಭಿಜಿತ್ ಮುಖರ್ಜಿ ಜನವರಿಯಲ್ಲಿ ಪ್ರಕಟವಾಗಲಿರುವ ಪ್ರಣಬ್ ಮುಖರ್ಜಿ ಅವರ ದಿ ಪ್ರೆಸಿಡೆನ್ಶಿಯಲ್ ಇಯರ್ಸ್ ಪುಸ್ತಕವನ್ನು ಪ್ರಕಟಿಸುವುದನ್ನು ತಕ್ಷಣ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
ಅಭಿಜಿತ್ ಮುಖರ್ಜಿ ಅವರು ಪುಸ್ತಕವನ್ನು ಓದುವವರೆಗೂ ನಿಷೇಧಿಸಿ ಮತ್ತು ಪುಸ್ತಕ ಪ್ರಕಟಣೆಗೆ ಲಿಖಿತ ಅನುಮೋದನೆ ನೀಡುವಂತೆ ಪ್ರಕಾಶಕ ರೂಪಾ ಪಬ್ಲಿಕೇಶನ್ಸ್ ಅವರನ್ನು ಕೇಳಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಅಭಿಜಿತ್ ಮುಖರ್ಜಿ ತಮ್ಮ ಟ್ವೀಟ್ ‌ನಲ್ಲಿ ಪುಸ್ತಕದಲ್ಲಿನ ಕೆಲವು ಭಾಗಗಳು ಪ್ರೇರಿತವಾಗಿವೆ ಮತ್ತು ಈಗಾಗಲೇ ಮಾಧ್ಯಮಗಳಲ್ಲಿವೆ ಎಂದು ಆರೋಪಿಸಿದ್ದಾರೆ. ಈಗ ನಮ್ಮ ತಂದೆ ದಿವಂಗತ ಪ್ರಣಬ್ ಮುಖರ್ಜಿ ಕೂಡ ಜೀವಂತವಾಗಿದ್ದಲ್ಲಿ ಖಮಡಿತವಾಗಿಯೂ ಅವರು ಕೂಡ ಇಡೀ ಪುಸ್ತಕವನ್ನು ಪ್ರಕಟಿಸುವ ಮೊದಲು ಓದಲು ಬಯಸುತ್ತಿದ್ದರು ಎಂದು ಹೇಳಿದ್ದಾರೆ.
ಪ್ರಣಬ್ ಮುಖರ್ಜಿ ಅವರ ಈ ಪುಸ್ತಕ ಮುಂದಿನ ವರ್ಷದ ಜನವರಿಯಲ್ಲಿ ಬರಲಿದೆ ಮತ್ತು ಪ್ರಕಟಣೆಯ ಮೊದಲು ಪುಸ್ತಕದ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿವೆ ಎಂಬುದು ಗಮನಿಸಬೇಕಾದ ಸಂಗತಿ. ವಾಸ್ತವವಾಗಿ, ಈ ಪುಸ್ತಕದ ಪ್ರಕಾರ, ಪ್ರಣಬ್ ಮುಖರ್ಜಿ ಅವರು ಅಧ್ಯಕ್ಷರಾದ ನಂತರ ಕಾಂಗ್ರೆಸ್ ದಿಕ್ಕನ್ನು ಕಳೆದುಕೊಂಡಿತು ಮತ್ತು ಸೋನಿಯಾ ಗಾಂಧಿ ಅವರಿಗೆ ಪಕ್ಷದ ವ್ಯವಹಾರಗಳನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದಾರೆ ಎನ್ನಲಾಗುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: