ಮೈಸೂರು

ಡಿ.19 : ಪಿಂಚಣಿ ಅದಾಲತ್

ಮೈಸೂರು.ಡಿ.16:- ಜಿಲ್ಲಾ ಖಜಾನೆ ವತಿಯಿಂದ ರಾಜ್ಯ ನಿವೃತ್ತಿ/ ಕುಟುಂಬ ಪಿಂಚಣಿದಾರರಿಗೆ ಹಾಲಿ 4 ರಾಷ್ಟ್ರೀಕೃತ ಬ್ಯಾಂಕುಗಳಿಗೆ ಇತರೆ 13 ಸಾರ್ವಜನಿಕ ಬ್ಯಾಂಕುಗಳಿಂದ ವರ್ಗಾವಣೆಯಾದ ಪಿಂಚಣಿ ಪಾವತಿ ಸಂಬಂಧ ಆದೇಶಗಳನ್ನು ಈಗಾಗಲೇ ಪಿಂಚಣಿದಾರರು ಅಭಿಮತ ಸಲ್ಲಿಸಿದ ಬ್ಯಾಂಕುಗಳಿಗೆ ಜಿಲ್ಲಾ ಖಜಾನೆಯಿಂದ ರವಾನಿಸಲಾಗಿದ್ದು, ಕೆಲವೊಂದು ಬ್ಯಾಂಕುಗಳಲ್ಲಿ ಈ ತಹಲ್ವರೆಗೂ ಪಿಂಚಣಿದಾರರಿಗೆ ಪಿಂಚಣಿ ಪಾವತಿಸದಿರುವುದು ಕಂಡುಬಂದಿದೆ.
ಈ ಸಂಬಂಧ ಮೈಸೂರಿನ ಜಿಲ್ಲಾ ಖಜಾನೆ ವತಿಯಿಂದ ಡಿಸೆಂಬರ್ 19 ರಂದು ಬೆಳಿಗ್ಗೆ 11 ಗಂಟೆಗೆ ಜಂಟಿನಿರ್ದೇಶಕರ ಅಧ್ಯಕ್ಷತೆಯಲ್ಲಿ ‘ಪಿಂಚಣಿದಾರರ ಪಿಂಚಣಿ ಅದಾಲತ್’ ಕರೆಯಲಾಗಿದೆ.
ಪಿಂಚಣಿ ಪಾವತಿಯಾಗದ ಪಿಂಚಣಿದಾರರು ಸಂಬಂಧಿಸಿದ ದಾಖಲೆಗಳೊಂದಿಗೆ ಅದಾಲತ್ ಗೆ ಹಾಜರಾಗಬಹುದು. ಕೋವಿಡ್ ಮಾರ್ಗಸೂಚಿಯಂತೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: