ಮೈಸೂರು

ತಂಪು ಪಾನೀಯದಲ್ಲಿ ಮತ್ತು ಬರುವ ಮಿಶ್ರಣ ನೀಡಿ ಯುವತಿಯ ಮೇಲೆ ಅತ್ಯಾಚಾರ

ಯುವಕನೋರ್ವ ತನ್ನನ್ನು  ಪ್ರೀತಿಸಲು ನಿರಾಕರಿಸಿದ ಯುವತಿಗೆ ತಂಪು ಪಾನೀಯದಲ್ಲಿ ಮಂಪರು ಬರುವ ಮಿಶ್ರಣ ಹಾಕಿ ಬಲವಂತವಾಗಿ  ಕುಡಿಸಿ ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಮೈಸೂರಿನಲ್ಲಿ ನಡೆದಿದ್ದು,  ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಪದ್ಮನಾಭನಗರದ ನಿವಾಸಿ ಪ್ರಸ್ತುತ ಕುವೆಂಪುನಗರದಲ್ಲಿ ವಾಸಿಸುತ್ತಿರುವ ರಾಷಿ ಚೆನ್ನಪ್ಪ ಯುವತಿಯನ್ನು ಅತ್ಯಾಚಾರ ಮಾಡಿದ ಯುವಕನಾಗಿದ್ದಾನೆ. ಯುವತಿ ಈತನ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈತ ಮೈಸೂರಿನ ಖಾಸಗಿ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಕಳೆದ ಆರು ತಿಂಗಳ ಹಿಂದೆ ಕಾಳಿದಾಸ ರಸ್ತೆಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿದ್ದಾಗ ರಾಷಿ ಚನ್ನಪ್ಪ ನನ್ನನ್ನು ಮಾತನಾಡಿಸಲು ಪ್ರಯತ್ನಿಸಿದ್ದ. ಆದರೆ ನಾನು ನಿರಾಕರಿಸಿದಾಗ ನನ್ನನ್ನು ಹಿಂಬಾಲಿಸತೊಡಗಿದ್ದ. ನಾನು ನಿರ್ಲಕ್ಷ್ಯಿಸಿದ್ದೆ. ಇದಾದ ಹದಿನೈದು ದಿನಗಳ ಬಳಿಕ ಮತ್ತದೇ ರೆಸ್ಟೋರೆಂಟ್ ಬಳಿ ಆತ ಪ್ರತ್ಯಕ್ಷನಾಗಿದ್ದು, ತನ್ನನ್ನು ಪ್ರೀತಿಸುವಂತೆ ಪ್ರಸ್ತಾಪವಿಟ್ಟಿದ್ದ. ಆದರೆ ನಾನು ಪ್ರೀತಿ ನಿರಾಕರಿಸಿದೆ. ಆತ ಆ ಸಮಯ ಕೋಕ್ ಕುಡಿಯುವಂತೆ ನನ್ನನ್ನು ಬಲವಂತ ಮಾಡಿದ್ದು, ಕುಡಿದಾಗ ಮಂಪರು ಆವರಿಸಿತ್ತು. ಪ್ರಜ್ಞೆ ಬಂದು ನೋಡಿದಾಗ ವಸತಿಗೃಹದ ಹಾಸಿಗೆಯಲ್ಲಿದ್ದೆ. ನನ್ನನ್ನು ನಗ್ನಗೊಳಿಸಿದ್ದ ಆತ ನನ್ನ ಮೇಲೆ ಅತ್ಯಾಚಾರ ನಡೆಸಿದ್ದ. ತಕ್ಷಣ ಪೋಷಕರಿಗೆ ವಿಷಯ ತಿಳಿಸಿದ್ದೆ.  ಇದಾದ ಬಳಿಕ ನಿನ್ನ ಪೋಷಕರ ಬಳಿ ನನಗೆ ಒಂದು ಲಕ್ಷ ರೂ.ಕೊಡಿಸದಿದ್ದರೆ ನಿನ್ನ ನಗ್ನಾವಸ್ಥೆಯ ವಿಡಿಯೋ ಬಹಿರಂಗ ಪಡಿಸುವುದಾಗಿ ಬ್ಲ್ಯಾಕ್ ಮೇಲ್  ಮಾಡುತ್ತಿದ್ದಾನೆ. ಅವನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: