ಮೈಸೂರು

ವಿದ್ಯಾರ್ಥಿಗಳ ಗುರಿ ಸಮಾಜಮುಖಿಯಾಗಿರಬೇಕು: ರವಿ ಡಿ.ಚೆನ್ನಣ್ಣನವರ್

ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳ ಗುರಿಯು ಜೀವನದ ಉನ್ನತೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯತ್ತ ಕೇಂದ್ರೀಕರಿಸಬೇಕೆಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠ ರವಿ ಡಿ.ಚೆನ್ನಣ್ಣನವರ್ ಹೇಳಿದರು.

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಎಂಕಾಂ ವಿಭಾಗದ ವಿದ್ಯಾರ್ಥಿ ವೇದಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯ ಪದವಿ, ಇಂಜಿನಿಯರಿಂಗ್, ವಿಜ್ಞಾನ, ಮೆಡಿಕಲ್ ಯಾವುದೇ ವಿದ್ಯೆಯಾಗಿದ್ದರೂ ಮಾನವನ ಉನ್ನತೀಕರಣಕ್ಕೆ ಮತ್ತು ಮನುಷ್ಯನ ಅಗತ್ಯಗಳನ್ನು ಪೂರೈಸುವ ದಿಕ್ಕಿನಲ್ಲಿ ವ್ಯಕ್ತಿಗಳು ತೊಡಗಿಸಿಕೊಳ್ಳುವಂತಿದ್ದರೆ, ಆ ವಿದ್ಯೆ ಸಫಲವಾಗುತ್ತದೆ. ಶ್ರೇಷ್ಠ ಗುರುವೆಂದರೆ ಜೀವನದ ಅರ್ಧದಷ್ಟು ಆಯಷ್ಯವನ್ನು ಕೇವಲ ಕಲಿಕೆಯಲ್ಲಿ ತೊಡಗಿಸಿಕೊಂಡು 64 ವಿದ್ಯೆಗಳು ಕರಗತ ಮಾಡಿಕೊಂಡಿರುವವರು. ಅಂತಹವರಿಂದ ಸಮಾಜಕ್ಕೆ ಯಾವತ್ತೂ ಒಳ್ಳೆಯದೇ ಆಗಿದೆ ಎಂದರು.

ವಿದ್ಯಾರ್ಥಿಗಳು ತಮ್ಮಲ್ಲಿರುವ ಬುದ್ಧಿ ಶಕ್ತಿ ಮತ್ತು ಇತರ ಕೌಶಲಗಳನ್ನು ಸಂಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ತಾಂತ್ರಿಕಯುಗದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಸಾಧಕರು ಸಂಪೂರ್ಣ ಸಾಮರ್ಥ್ಯವನ್ನು ಉಪಯೋಗಿಸುವುದರಿಂದ ಸಾಧಕರಾಗುತ್ತಾರೆ. ಸಳ, ಮಯೂರವರ್ಮ, ಹಕ್ಕ ಬುಕ್ಕ, ಮಹಾತ್ಮಗಾಂಧಿ, ಅಬ್ದುಲ್ ಕಲಾಂ ಅವರು ಯುವ ಪೀಳಿಗೆಗೆ ಆದರ್ಶ ಹಾಗೂ ಅನುಕರಣೀಯರಾಗಿರುತ್ತಾರೆ ಎಂದು ಹೇಳಿದರು.

ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಕೋಶಾಧ್ಯಕ್ಷ ಎಸ್.ಎನ್. ಲಕ್ಷ್ಮೀನಾರಾಯಣ, ಪ್ರಾಂಶುಪಾಲ ಡಾ.ಎನ್. ಶಂಕರ್, ಗೌರವ ಅಧ್ಯಕ್ಷ ಗುಂಡಪ್ಪ ಗೌಡ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಎಸ್. ಮರೀಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: