ಮೈಸೂರು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರೋಧಿಸಿ ವಿನೂತನ ಪ್ರತಿಭಟನೆ

ಮೈಸೂರು,ಡಿ.17:- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ರೈತರ ಹೋರಾಟಕ್ಕೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ ವಿನೂತನವಾಗಿ ಬೆಂಬಲ ನೀಡಿದೆ.
ಮಹಿಳಾ ಕಾಂಗ್ರೆಸ್ ನಡಿಗೆ ಅನ್ನದಾತರ ಬಳಿಗೆ ಎಂಬ ಅಭಿಯಾನದ ಮೂಲಕ ರೈತರ ಹೊರಾಟಕ್ಕೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ ಅನ್ನದಾತರ ಬೆಂಬಲಕ್ಕೆ ನಿಂತಿದ್ದು, ಈ ನಡುವೆ ಈ ವಿನೂತನ ಅಭಿಯಾನಕ್ಕೆ ಮೈಸೂರು ಜಿಲ್ಲೆಯ ಹುಣಸೂರು ಬಳಿ ಚಾಲನೆ ನೀಡಿದ್ದು ಅಲ್ಲಿಂದಲೇ ಆರಂಭವಾಗಿದೆ.
ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರ್ ನಾಥ್ ನೇತೃತ್ವದಲ್ಲಿ ರೈತರ ಹೊಲದತ್ತ ನಡಿಗೆ ಅಭಿಯಾನ ಪ್ರಾರಂಭಿಸಿದ್ದು, ಡಾ.ಪುಷ್ಪಾ ಅಮರನಾಥ್ ಮತ್ತು ಮಹಿಳಾ ಕಾರ್ಯಕರ್ತೆಯರು ರೈತರ ಹೊಲಗಳಿಗೆ ಭೇಟಿ ನೀಡಿ ಶ್ರಮದಾನ ಮಾಡಿದರು.
ಭತ್ತ ಮತ್ತು ರಾಗಿ ಕಟಾವು ಮಾಡಿ ರೈತರಿಗೆ ಸಾಥ್ ನೀಡಿ ಹೊಲದಲ್ಲೇ ಬೆಳೆದ ಉತ್ಪನ್ನಗಳಿಂದ ಜಮೀನಿನಲ್ಲೇ ಅಡುಗೆ ತಯಾರು ಮಾಡಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ರೈತರ ಜೊತೆ ಹೊಲದಲ್ಲೇ ಊಟ ಸವಿದರು. ನಂತರ ರೈತರ ಸಮಸ್ಯೆಗಳನ್ನು ಆಲಿಸುತ್ತ ಕೃಷಿ ಮಸೂದೆ ಬಗ್ಗೆ ರೈತರೊಂದಿಗೆ ಚರ್ಚಿಸಿದರು. ಇದೇ ವೇಳೆ ರೈತರು, ರೈತ ಮಹಿಳೆಯರು, ಕೃಷಿ ಕೂಲಿ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮೈಸೂರು ಜಿಲ್ಲೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ಮಹಿಳಾ ಕಾಂಗ್ರೆಸ್ ಈ ಅಭಿಯಾನ ಹಮ್ಮಿಕೊಳ್ಳಲು ಮುಂದಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: