ಮೈಸೂರು

ಹಿರಿಯ ನಾಗರಿಕರಿಗೆ ವಿಶೇಷ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಮೈಸೂರು. ಡಿ.18:- ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಮೈಸೂರಿನ ಸ್ನಾತಕೋತ್ತರ ಸ್ವಸ್ಥವೃತ್ತ ವಿಭಾಗದ ವತಿಯಿಂದ ಇತ್ತೀಚೆಗೆ ಮೈಸೂರಿನ ಜನತೆಗೆ ಉಚಿತ ಮಧುಮೇಹ ಮತ್ತು 60 ವರ್ಷಗಳಿಗೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿಶೇಷ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಮೈಸೂರಿನ ಕುವೆಂಪುನಗರದಲ್ಲಿ ಆಯೋಜಿಸಲಾಗಿತ್ತು.
ಆರೋಗ್ಯ ಭಾರತಿ ಕಛೇರಿಯಲ್ಲಿ ನಡೆದ ಈ ಶಿಬಿರದಲ್ಲಿ ತಜ್ಞ ವೈದ್ಯರುಗಳಿಂದ, ಎಲ್ಲಾ ಪ್ರಾಯದ ಮಧುಮೇಹ ರೋಗಿಗಳಿಗೆ ಮತ್ತು ವೃದ್ಯಾಪ್ಯದ ಸಹಜ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ನೆನಪಿನ ಶಕ್ತಿ, ಕೊರತೆ ಮತ್ತು ವಿಶೇಷವಾಗಿ ಆರೋಗ್ಯವಂತರ ರೋಗ ನಿರೋಧಕ ಶಕ್ತಿ ವರ್ಧಿಸುವ ಔಷಧಗಳನ್ನು ವಿತರಿಸಲಾಯಿತು.
ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆದ ಈ ಶಿಬಿರವನ್ನು ಉದ್ಘಾಟಿಸಿ ಮಾತಾನಾಡಿದ ಸಂಸ್ಥೆಯ ಪ್ರಾಚಾರ್ಯರಾದ ಡಾ. ಗಜಾನನ ಹೆಗಡೆ ಮೈಸೂರಿನ ಜನೆತೆಗೆ ಈ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ವಿನಂತಿಸಿದರು.
ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಡಾ. ವೆಂಕಟಪ್ಪ ಕೆ.ವಿ., ಡಾ ಆಶಾ ಮತ್ತು ಡಾ. ರೂಪಶ್ರೀ ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚು ಮಂದಿ ಶಿಬಿರದ ಉಪಯೋಗ ಪಡೆದುಕೊಂಡರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: