ಸುದ್ದಿ ಸಂಕ್ಷಿಪ್ತ

ಶೂನ್ಯ ನೆರಳು ದಿನ ಕಾರ್ಯಾಗಾರ

ಮೈಸೂರಿನಲ್ಲಿ ಏಪ್ರಿಲ್ 22 ರಂದು ಸೂರ್ಯ ನೆತ್ತಿಯ ಮೇಲೆ ಸರಿಯಾಗಿ ಹಾದು ಹೋಗುತ್ತದೆ. ಅಂದು ಮಾತ್ರ ಮಧ್ಯಾಹ್ನ ನೆರಳು ಶೂನ್ಯವಾಗಿರುತ್ತದೆ. ಆ ದಿನ ಮಧ್ಯಾಹ್ನಯಾವುದೇ ವಸ್ತುಗಳಿಗೆ ನೆರಳು ಇಲ್ಲದಂತಾಗುತ್ತದೆ. ಇದನ್ನು ಜನಸಾಮಾನ್ಯರೆಲ್ಲರೂ ವೀಕ್ಷಿಸಬಹುದು. ಯಾವುದೇ ವಿಶೇಷ ಉಪಕರಣ ಬೇಕಿಲ್ಲ. ವರ್ಷದಲ್ಲಿಎರಡು ದಿನಗಳು ಮಾತ್ರ ಮಧ್ಯಾಹ್ನದ ನೆರಳು ಇಲ್ಲವಾಗುತ್ತದೆ ಆ ದಿನಗಳನ್ನು ಶೂನ್ಯ ನೆರಳು ದಿನ ಎನ್ನಲಾಗುತ್ತದೆ. ಆ ದಿನವನ್ನುಆಚರಿಸುವ ಸಲುವಾಗಿ ಪೂರ್ವಭಾವಿಯಾಗಿ ಮೈಸೂರ್ ಸೈನ್ಸ್ ಫೌಂಡೇಷನ್ ಏ.18ರಂದು ಖಗೋಳ ವಿದ್ಯಮಾನ ವಾದ“ಶೂನ್ಯ ನೆರಳು ದಿನ”0 ಕುರಿತಾಗಿ ಅರ್ಧ ದಿನದ ಕಾರ್ಯಾಗಾರವನ್ನು ಶಾರದ ವಿಲಾಸ ಬಿ.ಎಡ್‍ಕಾಲೇಜಿನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಆಯೋಜನೆ ಮಾಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದ್ದು, ಹೆಸರನ್ನು ನೊಂದಾಯಿಸಿಕೊಳ್ಳಲು ಜಿ.ಬಿ.ಸಂತೋಷ್‍ಕುಮಾರ್ ಮೊ.ಸಂ.8105503863 ಸಂಪರ್ಕಿಸಬಹುದು.

Leave a Reply

comments

Related Articles

error: