ಕ್ರೀಡೆದೇಶಪ್ರಮುಖ ಸುದ್ದಿ

ಕುಸ್ತಿ ವಿಶ್ವಕಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಅಂಶು ಮಲಿಕ

ವಿದೇಶ(ಬೆಲ್ ಗ್ರೇಡ್).ಡಿ.18:- ಇಲ್ಲಿ ನಡೆದ ವೈಯುಕ್ತಿಕ ಕುಸ್ತಿ ವಿಶ್ವಕಪ್ ನಲ್ಲಿ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಏಕೈಕ ಭಾರತೀಯ ಮಹಿಳಾ ಕುಸ್ತಿಪಟು ಆಗಿ ಅಂಶು ಮಲಿಕ ಹೊರಹೊಮ್ಮಿದ್ದಾರೆ.
ಜೂನಿಯರ್ ವಿಭಾಗದಲ್ಲಿ ಛಾಪು ಮೂಡಿಸಿದ ನಂತರ, ಹಿರಿಯ ವಿಭಾಗದಲ್ಲಿ ಆಡುತ್ತಿರುವ ಅಂಶು, ಈ ಮಟ್ಟದಲ್ಲಿ ಮೂರು ಪಂದ್ಯಾವಳಿಗಳಲ್ಲಿ ಮೂರನೇ ಪದಕ ಗೆದ್ದಿದ್ದಾರೆ. ಬುಧವಾರ ರಾತ್ರಿ ನಡೆದ ಶೀರ್ಷಿಕೆ ಪಂದ್ಯದಲ್ಲಿ ಅಂಶು ಮಾಲ್ಡೋವಾದ ಅನಸ್ತಾಸಿಯಾ ನಿಚಿತಾ ವಿರುದ್ಧ 1–5ರಿಂದ ಸೋತರು.
ಈ ವರ್ಷ ನವದೆಹಲಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಅಂಶು ಕಂಚಿನ ಪದಕ ಗೆದ್ದಿದ್ದರೆ, ಜನವರಿಯಲ್ಲಿ ರೋಮ್ನಲ್ಲಿ ನಡೆದ ಮ್ಯಾಟಿಯೊ ಪೆಲಿಕಾನ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ವಿಶ್ವ ಚಾಂಪಿಯನ್ ಶಿಪ್ ಪದಕ ವಿಜೇತ ಪೂಜಾ ಧಂಡಾ ಮತ್ತು 57 ಕೆಜಿ ವಿಭಾಗದಲ್ಲಿ ಅನುಭವಿ ಸರಿತಾ ಮೋರ್ ಇದ್ದರೂ ಅಂಶು ಈ ವಿಭಾಗದಲ್ಲಿ ತಮ್ಮ ಹಕ್ಕನ್ನು ಬಲಪಡಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: